ಪೊಲೀಸ್ ವಾಹನದಲ್ಲಿ ಕುಳಿತು ರೀಲ್ಸ್: ಯುವಕನ ಬಂಧನ
ಲಕ್ನೋ: ಪೊಲೀಸ್ ವಾಹನವನ್ನು ಬಳಸಿಕೊಂಡು ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ರೀಲ್ಸ್ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಇಂದಿರಾಪುರಂ ಪ್ರದೇಶದಲ್ಲಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾಗ ಮೊಯಿನ್ ಖಾನ್ ಎಂಬಾತ ಖಾಲಿಯಿದ್ದ ಪೊಲೀಸ್ ವಾಹನವನ್ನು ಬಳಸಿಕೊಂಡು ಅದರಲ್ಲಿ ಕೂತು ಸ್ಟೈಲಿಸ್ಟ್ ಆಗಿ ರೀಲ್ಸ್ ಮಾಡಿದ್ದಾನೆ.
ಪೊಲೀಸ್ ವಾಹನದ ಸೀಟಿನಿಂದ ಕೆಳಗಿಳಿದು, ಕೋಲ್ಡ್ ಡ್ರಿಂಕ್ ಕುಡಿಯುತ್ತಾ ಬರುವ ದೃಶ್ಯಕ್ಕೆ ಮ್ಯೂಸಿಕ್ ವೊಂದನ್ನು ಹಾಕಿ ರೀಲ್ಸ್ ಮಾಡಿ ಫೆ.15 ರಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೇಗದಲ್ಲಿ ವೈರಲ್ ಆಗಿದೆ.





