March 20, 2026

ಇನ್ಫೋಸಿಸ್‌ನ ಮಹಿಳಾ ಟೆಕ್ಕಿಯ ಗುಂಡಿಕ್ಕಿ ಹತ್ಯೆ

0
image_editor_output_image488594132-1706515864947.jpg

ಪುಣೆ: ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಓರ್ವಳನ್ನು ಶನಿವಾರ ರಾತ್ರಿ ಪುಣೆ ಹೊರವಲಯದಲ್ಲಿರುವ ಹೋಟೆಲ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಮಹಿಳೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಮಹಿಳೆಯನ್ನು ಉತ್ತರಪ್ರದೇಶದ ಮೂಲದ ವಂದನಾ ದ್ವಿವೇದಿ ಎನ್ನಲಾಗಿದೆ ಈಕೆ ಪುಣೆಯ ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಪಿಂಪ್ರಿ ಚಿಂಚ್‌ವಾಡ್‌ನ ಹಿಂಜೆವಾರಿ ಪ್ರದೇಶದ ಓಯೋ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹೋಟೆಲ್‌ಗೆ ಆಗಮಿಸಿದ ವೇಳೆ ಹೋಟೆಲ್ ಕೊಠಡಿಯಲ್ಲಿ ರಕ್ತದ ಮಡುವಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!