ಬಂಟ್ವಾಳ: ಕಸಕಡ್ಡಿಗೆ ಹಾಕಿದ್ದ ಬೆಂಕಿಗೆ ಸಿಲುಕಿ ದಂಪತಿ ಸಾವು
ಬಂಟ್ವಾಳ: ಕಸಕಡ್ಡಿಗೆ ಹಾಕಿದ್ದ ಬೆಂಕಿಗೆ ಸಿಲುಕಿ ದಂಪತಿ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ಬಂಟ್ವಾಳದ ಅಮ್ಟಾಡಿ ಬಳಿಯ ತುಂಡು ಪದವು ಎಂಬಲ್ಲಿ ನಡೆದಿದೆ.
ಲೊರೆಟ್ಟೊ ಸಮೀಪದ ತುಂಡುಪದವು ನಿವಾಸಿಗಳಾದ ಗಿಲ್ಬರ್ಟ್ ಕಾರ್ಲೋ (78) ಮತ್ತು ಅವರ ಪತ್ನಿ ಕ್ರಿಸ್ಟಿನಾ ಕಾರ್ಲೋ (70) ಮೃತ ದುರ್ದೈವಿಗಳು. ಮನೆ ಪಕ್ಕದ ಕಸ ಕಡ್ಡಿಗೆ ದಂಪತಿ ಬೆಂಕಿ ಹಾಕಿದ್ದು, ಗಾಳಿಯಿಂದಾಗಿ ಮನೆ ಪಕ್ಕದ ಕಾಡಿಗೂ ಬೆಂಕಿ ವ್ಯಾಪಿಸಿದೆ.
ಕಾಡಿಗೆ ವ್ಯಾಪಿಸಿದ ಬೆಂಕಿಯನ್ನು ನಂದಿಸಲು ದಂಪತಿ ಮುಂದಾಗಿದೆ. ಈ ಸಂದರ್ಭದಲ್ಲಿ ಬೆಂಕಿಯ ಕೆನ್ನಾಲಿಗೆಗೆ ದಂಪತಿ ಸಿಲುಕಿ ಜೀವಂತ ದಹನಗೊಂಡಿದ್ದಾರೆ. ಅಕ್ಕ ಪಕ್ಕದ ಮನೆಯವರು ಸ್ಥಳಕ್ಕೆ ತೆರಳಿ ನೋಡುವಷ್ಟರಲ್ಲಿ ದಂಪತಿ ಸಾವನ್ನಪ್ಪಿದ್ದರು. ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.