ತುಂಬೆ ಪ.ಪೂ ಕಾಲೇಜು ಬಳಿ ವೇಗದೂತ ಬಸ್ ನಿಲುಗಡೆಗೆ ಒತ್ತಾಯಿಸಿ ಜಿಲ್ಲಾ ಸಚಿವರಿಗೆ ಮನವಿ
ತುಂಬೆ: ತುಂಬೆ ಪ.ಪೂ ಕಾಲೇಜು ಬಳಿ ವೇಗದೂತ ಬಸ್ಸು ನಿಲುಗಡೆ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ದ.ಕ ಜಿಲ್ಲಾಧಿಕಾರಿಯವರಿಗೆ ಮಂಗಳವಾರದಂದು ಸುಳ್ಯದಲ್ಲಿ ನಡೆದ ಜನತಾ ದರ್ಶನದಲ್ಲಿ ಮನವಿಯನ್ನು ತುಂಬೆ ಪ.ಪೂ ಕಾಲೇಜಿನ ಕಛೇರಿ ಅಧೀಕ್ಷಕ ಬಿ.ಅಬ್ದುಲ್ ಕಬೀರ್ ಸಲ್ಲಿಸಿದರು.
ಸಚಿವರಿಗೆ ಮನವಿ ನೀಡುವ ಸಂದರ್ಭದಲ್ಲಿ ದ.ಕ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸರಸ್ವತಿ ಕಾಮತ್ ಇವರು ಸಹಕರಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಸಾಯಿರಾಮ್ ನಾಯಕ್ ಉಪಸ್ಥಿತರಿದ್ದರು.




