March 19, 2026

ಖ್ಯಾತ ಶಾಸ್ತ್ರೀಯ ಗಾಯಕ ಉಸ್ತಾದ್ ರಶೀದ್ ಖಾನ್ ನಿಧನ

0
IMG-20240109-WA0024.jpg

ಕೊಲ್ಕತ್ತಾ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖ್ಯಾತ ಶಾಸ್ತ್ರೀಯ ಗಾಯಕ ಉಸ್ತಾದ್ ರಶೀದ್ ಖಾನ್ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

55 ವರ್ಷದ ಕಲಾವಿದ ವೆಂಟಿಲೇಟರ್ ಮೂಲಕ ಆಯಕ್ಸಿಜನ್ ಪಡೆಯುತ್ತಿದ್ದರು.

ರಾಂಪುರ-ಸಹಸ್ವಾನ್ ಘರಾನಾದ 55 ವರ್ಷದ ರಶೀದ್ ಖಾನ್ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಅವರು ಕೋಲ್ಕತ್ತಾದಲ್ಲಿ ತಮ್ಮ ಚಿಕಿತ್ಸೆಯನ್ನು ಮುಂದುವರಿಸಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಉಸ್ತಾದ್ ರಶೀದ್ ಖಾನ್ ಮೃತಪಟ್ಟಿದ್ದಾರೆ.ಉತ್ತರ ಪ್ರದೇಶದ ಬದಾಯುನ್ನಲ್ಲಿ ಜನಿಸಿದ ರಶೀದ್ ಖಾನ್ ತಮ್ಮ ಆರಂಭಿಕ ತರಬೇತಿಯನ್ನು ತಮ್ಮ ತಾಯಿಯ ಅಜ್ಜ ಉಸ್ತಾದ್ ನಿಸಾರ್ ಹುಸೇನ್ ಖಾನ್ ಅವರಿಂದ ಪಡೆದಿದ್ದರು.

Leave a Reply

Your email address will not be published. Required fields are marked *

error: Content is protected !!