March 19, 2026

ಉಪ್ಪಿನಂಗಡಿ: ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಗೆ ನುಗ್ಗಿದ್ದ ಈಚರ್ ಲಾರಿ:
ಉಪ್ಪಿನಂಗಡಿ ಪೆರ್ನೆ ಜಂಕ್ಷನ್ ಬಳಿ ಘಟನೆ

0
IMG-20240109-WA0023.jpg

ಉಪ್ಪಿನಂಗಡಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಈಚರ್ ಲಾರಿಯೊಂದು ಇಳಿಜಾರು ಪ್ರದೇಶದಲ್ಲಿ ತನ್ನಷ್ಟಕ್ಕೆ ಹಿಮ್ಮುಖವಾಗಿ ಚಲಿಸಿ ಬಂದು ಗ್ಯಾರೇಜ್‍ ವೊಂದಕ್ಕೆ ನುಗ್ಗಿದ ಘಟನೆ ಉಪ್ಪಿನಂಗಡಿ ಪೆರ್ನೆ ಜಂಕ್ಷನ್ ಬಳಿ ಜ 8 ರಂದು ನಡೆದಿದೆ.

ಚಂದ್ರಶೇಖರ್ ಎಂಬುವವರಿಗೆ ಈ ಗ್ಯಾರೆಜ್ ಸೇರಿದ್ದು, ಘಟನೆ ನಡೆದ ಸಂದರ್ಭ ಗ್ಯಾರೇಜ್‍ನಲ್ಲಿ ಯಾರೂ ಇಲ್ಲದ್ದರಿಂದ ಅಪಾಯವೇನೂ ಸಂಭವಿಸಿಲ್ಲ. ಆದರೆ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಎರಡು ಬೈಕ್‍ಗಳಿಗೆ ಹಾಗೂ ಗ್ಯಾರೇಜ್‍ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಗ್ಯಾರೇಜ್‍ಗೆ ಲಾರಿ ನುಗ್ಗಿದ್ದರಿಂದ ಅಲ್ಲಿ ಜನಸಂದಣಿ ಸೇರಿತ್ತು. ಇದೇ ಸಂದರ್ಭ ಉಪ್ಪಿನಂಗಡಿಯಿಂದ ಮಾಣಿ ಕಡೆ ತೆರಳುತ್ತಿದ್ದ ಮಿನಿ ಟೆಂಪೋವೊಂದರ ಬ್ರೇಕ್ ಫೇಲ್ ಆಗಿ ಗ್ಯಾರೇಜ್‍ ಕಡೆ ಸಾಗಿ ಬರುತ್ತಿತ್ತು. ಆದರೆ ಸಮಯ ಪ್ರಜ್ಞೆ ಮೆರೆದ ಮಿನಿ ಟೆಂಪೋ ಚಾಲಕ ಮಿನಿ ಟೆಂಪೋವನ್ನು ಇನ್ನೊಂದು ಬದಿಗೆ ತಿರುಗಿಸಿದ್ದಾರೆ. ಇನ್ನು ಟೆಂಪೋ ತಿರುಗಿಸಿದ ಪರಿಣಾಮ ಪಕ್ಕದ ಗದ್ದೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಈ ಸಂದರ್ಭ ಟೆಂಪೋ ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!