ಪತಿ, ಮಗುವನ್ನು ಕೊಂದು ದರೋಡೆಯ ನಾಟಕವಾಡಿದ್ದ ಪತಿಯ ಬಂಧನ
ವ್ಯಕ್ತಿಯೊಬ್ಬ ತನ್ನ ಪತಿ, ಮಗುವನ್ನು ಕೊಂದು ದರೋಡೆಯ ನಾಟಕವಾಡಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಲಲಿತ್ ಪುರದಲಿ ನಡೆದಿದೆ.
ಆರೋಪಿಯನ್ನು ನೀರಜ್ ಕುಶ್ವಾಹ ಎಂದು ಗುರುತಿಸಲಾಗಿದ್ದು, ಲಲಿತ್‌ಪುರದ ಸದರ್ ಕೊಟ್ವಾಲಿ ಪ್ರದೇಶದ ಚಂದಮಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರಾತ್ರಿ 1.30ರ ವೇಳೆಗೆ 6 ಮಂದಿ ದುಷ್ಕರ್ಮಿಗಳು ನುಗ್ಗಿ ಪತ್ನಿ ಹಾಗೂ ಮಗಳನ್ನು ಕೊಂದು ನನ್ನ ಬಾಯಿಗೆ ಸಾಕ್ಸ್ ತುರುಕಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ನೀರಜ್ ಕುಶ್ವಾಹ ಮಾಹಿತಿ ಕೊಟ್ಟಿದ್ದಾರೆ. ಗಾಯದಿಂದ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.




