ಕಾಸರಗೋಡು: ತಾಯಿಯೊಂದಿಗೆ ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿ: ಬಾಲಕ ಮೃತ್ಯು, ತಾಯಿ ಗಂಭೀರ
ಕಾಸರಗೋಡು: ತಾಯಿಯೊಂದಿಗೆ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿ ಬೈಕ್ ಅಪಘಾತದಿಂದ ಮೃತಪಟ್ಟ ಘಟನೆ ಚೆರ್ಕಳದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮೃತಪಟ್ಟ ವಿದ್ಯಾರ್ಥಿ ಏತನೀರು ಕಳರಿಯ ಅರವಿಂದಾಕ್ಷನ್ ಮತ್ತು ಸುಚಿತ್ರ ದಂಪತಿಯ ಪುತ್ರ ಅಂಶಿತ್ (6) ಮೃತ ಬಾಲಕ.
ಪಾಟಿತ್ತೋಡ್ ಮತ್ತು ನೆಲ್ಲಿಕಟಾ ನಡುವೆ ಅಪಘಾತ ಸಂಭವಿಸಿದೆ. ಬೈಕ್ ತುಂಬಾ ವೇಗವಾಗಿ ವಿರುದ್ಧ ದಿಕ್ಕಿನಲ್ಲಿ ಬಂದು ತಾಯಿ ಮತ್ತು ಮಗನಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಚೆಂಗಳ ಇ.ಕೆ.ನಾಯನಾರ್ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.




