March 26, 2026

ಕಡಬ: ಚಿಲ್ಲರೆ ನೀಡಿಲ್ಲವೆಂದು ವೃದ್ಧನನ್ನು ರಸ್ತೆ ಮಧ್ಯೆಯೇ ಇಳಿಸಿದ ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕ

0
IMG-20240107-WA0016.jpg

ಕಡಬ: ಚಿಲ್ಲರೆ ನೀಡಿಲ್ಲವೆಂಬ ಕಾರಣಕ್ಕೆ ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕ ವೃದ್ಧರೋರ್ವರನ್ನು ರಸ್ತೆ ಬದಿ ಇಳಿಸಿಹೋದ ಘಟನೆ ಕಡಬದಲ್ಲಿ ಶನಿವಾರ ನಡೆದಿದ್ದು, ಬಸ್ ನಿರ್ವಾಹಕನ ಈ ಅಮಾನವೀಯ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಲುಗುಡ್ಡೆ ನಿವಾಸಿ ವೃದ್ಧರೋರ್ವರು ಇಂದು ಬೆಳಗ್ಗೆ 9.30ಕ್ಕೆ ಕಲ್ಲುಗುಡ್ಡೆಯಿಂದ ಇಚಿಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ ಆರ್ ಟಿಸಿ ಬಸ್ ಅನ್ನು ಕಲ್ಲುಗುಡ್ದೆಯಲ್ಲಿ ಹತ್ತಿದ್ದಾರೆ. ಬಸ್ ಹತ್ತಿ ಕಾಂಚನ ಎಂಬಲ್ಲಿಗೆ ಟಿಕೆಟ್ ನೀಡುವಂತೆ 200 ರೂ. ನೀಡಿದ್ದಾರೆ. ಈ ವೇಳೆ ಬಸ್ ನಿರ್ವಾಹಕ ಚಿಲ್ಲರೆ ಕೇಳಿದ್ದು, ವೃದ್ಧರು ಚಿಲ್ಲರೆ ಇಲ್ಲವೆಂದು ಹೇಳಿದಾಗ ಅರ್ಧ ದಾರಿಯಲ್ಲೇ ಇಳಿಸಿದ್ದಾನೆ ಎನ್ನಲಾಗಿದೆ.

ತಾನು ಕಾಂಚನದಲ್ಲಿ ಇಳಿಯುವ ವೇಳೆ ಚಿಲ್ಲರೆ ನೀಡಿದರೆ ಸಾಕು ಎಂದು ವೃದ್ಧರು ಮನವಿ ಮಾಡಿಕೊಂಡಿದರೂ ನಿರ್ವಾಹಕ ಕ್ಯಾರೇ ಎನ್ನದೇ ಗೋಳಿಯಡ್ಕ ಎಂಬಲ್ಲಿ ಅವರನ್ನು ರಸ್ತೆ ಬದಿ ಇಳಿಸಿ ಹೋಗಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!