ಬಸ್ ನಿಲ್ದಾಣದ ಬಾಕ್ಸ್ ನಲ್ಲಿ ನವಜಾತು ಶಿಶುವಿನ ಮೃತದೇಹ ಪತ್ತೆ
ಕುಷ್ಟಗಿ: ಬಸ್ ನಿಲ್ದಾಣದ ಹಿಂಬದಿಯ ಕಂಪೌಂಡ್ ಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಗುರುವಾರ ಸಂಜೆ ನವಜಾತ ಶಿಶುವಿನ ಮೃತ ದೇಹ ಸರಕಾರಿ ಆಸ್ಪತ್ರೆಯ ಇಂಜಕ್ಷನ್ ವೈಲ್ ಬಾಕ್ಸ್ ನಲ್ಲಿ ಕಂಡು ಬಂದಿದೆ.
ಬಸ್ ನಿಲ್ದಾಣದ ಕಂಪೌಂಡ್ ಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಅವಧಿ ಪೂರ್ಣವಾಗದೇ ಜನಿಸಿದ ನವಜಾತ ಶಿಶುವಿನ ಮೃತ ದೇಹವನ್ನು ಇಂಜಕ್ಷನ್ ವೈಲ್ ಬಾಕ್ಸನಲ್ಲಿ ನಾಯಿಯೊಂದು ಎಳೆದಾಡಿದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಂಚರಿಸುವವರಿಗೆ ಕಂಡು ಬಂದಿದೆ.
ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.
ಹಿರಿಯ ಆರೋಗ್ಯ ಮೇಲ್ವಿಚಾರಕಿ ಸುಶೀಲಾ ಆಗಮಿಸಿ, ಪರಿಶೀಲಿಸಿದ್ದಾರೆ. ಮೃತ ಶಿಶು ಹೆಣ್ಣು ಆಗಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಕರೆದೊಯ್ದರು.
ಈ ಪ್ರಕರಣದ ಹಿನ್ನೆಲೆಯಲ್ಲಿ ಸಾಕಷ್ಟು ಜನ ನೆರೆದಿದ್ದು, ತಾಯಿ ಗರ್ಭದಿಂದ ಹೊರಬರುವ ಮೊದಲೇ ಈ ಸ್ಥಿತಿ ಕಂಡು ಮರುಗಿದರು. ಪುರಸಭೆ ನೈರ್ಮಲ್ಯ ಅಧಿಕಾರಿ ಪ್ರಾಣೇಶ ಬಳ್ಳಾರಿ, ಎಎಸೈ ತಾಯಪ್ಪ ಇದ್ದರು.





