December 19, 2025

ಮಳಿಗೆಯಲ್ಲಿದ್ದ 95 ಲಕ್ಷ ರೂ.ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳ ಕಳವು: 6 ಮಂದಿ ಸೇಲ್ಸ್ ಗರ್ಲ್ಸ್ ನ ಬಂಧನ

0
image_editor_output_image1951904253-1704310883420.jpg

ಮಹಾರಾಷ್ಟ್ರ: ಆಭರಣ ಮಳಿಗೆಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದ 6 ಮಹಿಳೆಯರನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ.

ಈ ಮಹಿಳೆಯರು ಅಂಗಡಿಯಲ್ಲಿದ್ದ 95 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಕದ್ದೊಯ್ದಿದ್ದಾರೆ. ಅಂಗಡಿ ಮಾಲೀಕರು ಅನುಮಾನಗೊಂಡಾಗ ಇಡೀ ವಿಷಯ ಬೆಳಕಿಗೆ ಬಂದಿದೆ.

2019-2023ರವರೆಗೆ ಕಳ್ಳಾಟ
ದೂರುದಾರ ಶಾಂತನು ದೀಪಕ್ ಚಿಮುರ್ಕರ್ ನಾಗ್ಪುರ ನಗರದ ತಹಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸರಾಫಾ ಬಜಾರ್‌ನಲ್ಲಿ ಚಿಮುರ್ಕರ್ ಬ್ರದರ್ಸ್ ಹೆಸರಿನ ಆಭರಣ ಅಂಗಡಿಯನ್ನು ಹೊಂದಿದ್ದಾರೆ.

ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಸೇಲ್ಸ್ ಗರ್ಲ್ ಗಳು ಅಂಗಡಿಯಲ್ಲಿದ್ದ 95 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಕದ್ದೊಯ್ದಿದ್ದಾರೆ. ಈ ಕಳ್ಳತನದ ಆಟ 2019 ರಿಂದ 2023 ರವರೆಗೆ ಮುಂದುವರೆಯಿತು.

ಅಂಗಡಿ ಮಾಲೀಕರಿಗೆ ಅನುಮಾನ ಬಂದಾಗ ಇಡೀ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಅಂಗಡಿ ಮಾಲೀಕರು ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆಯ ಸಮಯದಲ್ಲಿ ಪೊಲೀಸರು ಆಭರಣ ಅಂಗಡಿಯ ಸೇವಕನನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಿದಾಗ ಸಂಪೂರ್ಣ ವಿಷಯ ಬೆಳಕಿಗೆ ಬಂದಿದೆ.

86 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆ
ಕಳ್ಳತನ ಪ್ರಕರಣದಲ್ಲಿ ತಹಸಿಲ್ ಪೊಲೀಸರು ಸ್ವಾತಿ ಲೂಟ್, ಪ್ರಿಯಾ ರಾವುತ್, ಪೂಜಾ ಭಾನಾರ್ಕರ್, ಕಲ್ಯಾಣಿ ಖಲಟ್ಕರ್, ಭಾಗ್ಯಶ್ರೀ ಇಂದಾಲ್ಕರ್ ಮತ್ತು ಮನೀಶಾ ಮಹುರಾಳೆ ಅವರನ್ನು ಬಂಧಿಸಿದ್ದಾರೆ.

ಈ ಆರು ಮಂದಿ ಸೇಲ್ಸ್ ಗರ್ಲ್ಸ್ ಸೇರಿ 1 ಕೆಜಿ 450 ಗ್ರಾಂ ಚಿನ್ನಾಭರಣ ಹಾಗೂ 10.5 ಕೆಜಿ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದು, ಇದರ ಮೌಲ್ಯ 95 ಲಕ್ಷ ರೂ. ಎನ್ನಲಾಗಿದೆ. ಈ ಎಲ್ಲಾ ಮಹಿಳಾ ಆರೋಪಿಗಳಿಂದ 86 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!