ಬಿಜೆಪಿಯವರು ಮಾತ್ರ ದೇಣಿಗೆ ಕೊಟ್ಟದ್ದೇ, ಇದು ಪಕ್ಷದ ಮಂದಿರ ಹೇಗೆ ಸಾಧ್ಯ?: ಪೇಜಾವರದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಜನವರಿ 17 ಕ್ಕೆ ಬಾಲರಾಮನ ವಿಗ್ರಹ ಯಾವುದೆಂದು ಘೋಷಣೆ ಆಗುತ್ತದೆ. ಮೆರವಣಿಗೆ, ಸರಯೂ ನದಿಯ ಅಭಿಷೇಕದ ದಿನ ಮೂರ್ತಿ ಯಾವುದೆಂದು ಬಹಿರಂಗ ಆಗುತ್ತದೆ ಎಂದು ಉಡುಪಿಯಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಇನ್ನು ಅಯೋಧ್ಯೆಯಲ್ಲಿ ಇರುವುದು ಬಿಜೆಪಿ ರಾಮ ಮಂದಿರ ಎಂದಿರುವ ಮಾಜಿ ಸಚಿವ ಆಂಜನೇಯ ಉಡುಪಿಯಲ್ಲಿ ಪೇಜಾವರ ಮಠಾಧೀಶ ಪ್ರತಿಕ್ರಿಯೆ ನೀಡಿ, ರಾಮ ಬೇರೆಯಲ್ಲ ಕೃಷ್ಣ ಬೇರೆಯಲ್ಲ. ದೇವರು ಮಂದಿರದಲ್ಲಿ ಮಾತ್ರವಲ್ಲ ಎಲ್ಲರೊಳಗಿದ್ದಾನೆ. ಸಿದ್ದರಾಮಯ್ಯನೊಳಗೂ ಇದ್ದಾನೆ. ಬಿಜೆಪಿ ಮಂದಿರವೆಂದು ಯಾಕೆ ಹಾಗೆ ಅಂದುಕೊಳ್ಳಬೇಕು? ನಾವು ಭಾರತೀಯರು ಈ ಮಂದಿರ ಎಲ್ಲರದ್ದೂ ಎಂದರು.
ಬಿಜೆಪಿಯವರು ಮಾತ್ರ ದೇಣಿಗೆ ಕೊಟ್ಟದ್ದಾ? ಇದು ಪಕ್ಷದ ಮಂದಿರ ಹೇಗೆ ಸಾಧ್ಯ? ಪಕ್ಷದ, ಸರಕಾರದ ದೇಣಿಗೆಯಿಂದ ಮಂದಿರ ಕಟ್ಟಿದ್ದಲ್ಲ. ಜಗತ್ತಿನ ಭಕ್ತರ ದೇಣಿಗೆಯಿಂದ ಕಾರ್ಯಕ್ರಮ ನಡೆಯುತ್ತಿದೆ ಎಂದು ರಾಮ ಮಂದಿರದ ಟ್ರಸ್ಟಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.





