ಮಡಿಕೇರಿ: ಕಾರು, ಲಾರಿ ನಡುವೆ ಭೀಕರ ಅಪಘಾತ: ಯುವಕ ಮೃತ್ಯು
ಮಡಿಕೇರಿ: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೊಡಗು ಜಿಲ್ಲೆಯ ಯುವಕನೋರ್ವ ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ರಂಜನ್ (35) ಮೃತ ದುರ್ದೈವಿ. ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ಹಾಗೂ ಶ್ರೀ ಕುರುಂಬ ಭಗವತಿ ಕೊಡಂಗಲೂರಮ್ಮ ದೇವಸ್ಥಾನದ ಮುಖ್ಯಸ್ಥರಾದ ರಾಜಣ್ಣ ಅವರ ಪುತ್ರ ರಂಜನ್ ಅಮೇಜಾನ್ ಕಂಪನಿಯ ಉದ್ಯೋಗಿಯಾಗಿದ್ದು, ಒಂದು ವಾರದ ಹಿಂದೆಯಷ್ಟೇ ಮ್ಯಾನೇಜರ್ ಹುದ್ದೆಗೆ ಬಡ್ತಿ ನೀಡಲಾಗಿತ್ತು.





