ಎಸ್.ಕೆ.ಎಸ್.ಎಸ್.ಎಫ್ ಸದಸ್ಯತ್ವ ಅಭಿಯಾನ: ಸುಳ್ಯ ವಲಯ ಮಟ್ಟದ ಉದ್ಘಾಟನೆ
ಸುಳ್ಯ: ‘ರಾಜಿಯಾಗದ ಸ್ವಾಭಿಮಾನ’ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಮಟ್ಟದ ಸದಸ್ಯತ್ವ ಅಭಿಯಾನದ ಉದ್ಘಾಟನೆ ಡಿ. 03 ರಂದು ಸುಳ್ಯದ ಸುನ್ನೀ ಮಹಲ್ ಕಚೇರಿಯಲ್ಲಿ ನಡೆಯಿತು.
ತ್ವಲಬಾ ವಿಂಗ್ ಚೇರ್ಮನ್ ಕಬೀರ್ ಉಸ್ತಾದ್ ಅಜ್ಜಾವರ ಅವರಿಂದ ಎಸ್.ಕೆ.ಎಸ್.ಎಸ್.ಎಫ್ ಸದಸ್ಯತ್ವ ಅಪೇಕ್ಷಾ ಫಾರಂ ಸ್ವೀಕರಿಸುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯಾಧ್ಯಕ್ಷ ಜಮಾಲ್ ಬೆಳ್ಳಾರೆ, ಪ್ರ.ಕಾರ್ಯದರ್ಶಿ ಅಕ್ಬರ್ ಕರಾವಳಿ, ಕ್ಲಸ್ಟರ್ ಅಧ್ಯಕ್ಷ ರಜಾಕ್ ಕರಾವಳಿ, ಅಬ್ದುಲ್ ಖಾದರ್ ಫೈಝಿ, ಶಮೀಮ್ ಆರ್ಶದಿ, ಶಾಫಿ ಮುಕ್ರಿ ಅಜ್ಜಾವರ, ಬಶೀರ್ ಯು.ಪಿ, ಆಶಿಕ್ ಸುಳ್ಯ, ಶಹೀದ್ ಪಾರೆ, ತಾಜುದ್ದೀನ್ ಪಾಲ್ತಾಡ್, ಝುಬೈರ್ ಆರಂತೋಡ್, ಹಮೀದ್ ಯಮಾನಿ ಉಪಸ್ಥಿತರಿದ್ದರು.





