ವಿಟ್ಲ: ಕ್ರಿಸ್ಮಸ್ ಪ್ರಯುಕ್ತ ಚರ್ಚ್ ಧರ್ಮ ಗುರುಗಳ ನೇತೃತ್ವದಲ್ಲಿ ಧರ್ಮ ಕೇಂದ್ರಗಳಿಗೆ ಭೇಟಿ

ವಿಟ್ಲ: ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದ ಪೆರುವಾಯಿ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿವಿಧ ಧರ್ಮ ಕೇಂದ್ರಗಳಿಗೆ ಭೇಟಿ ನೀಡಲಾಯಿತು.
ಕ್ರಿಸ್ಮಸ್ ಹಿನ್ನೆಲೆಯಲ್ಲಿ ಬಂಧುತ್ವ ಕ್ರಿಸ್ತ್ಮಸ್ ಸಂದೇಶ ಸಾರುವ ನಿಟ್ಟಿನಲ್ಲಿ ಪೆರುವಾಯಿ ಚರ್ಚ್ ವತಿಯಿಂದ ದೇವಸ್ಥಾನ ಮಸೀದಿಗಳಿಗೆ ಚರ್ಚ್ ಧರ್ಮ ಗುರು ಸೈಮನ್ ಡಿ ಸೋಜ ನೇತೃತ್ವದಲ್ಲಿ ಭೇಟಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಧಾಮ ಮಾಣಿ ಮೋಹನ್ ದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಕುಕ್ಕಜೆ ಶ್ರೀ ಕೃಷ್ಣಗುರೂಜಿ, ಪೆರುವಾಯಿ ಬದ್ರಿಯಾ ಜುಮ್ಮಾ ಮಸೀದಿ ಮುಹಮ್ಮದ್ ಶರೀಫ್ ಮದನಿ, ಪೆರುವಾಯಿ ಎಂಜೆಎಂ ಮಸೀದಿ ಖತೀಬ್ ಸ್ವಾದಿಕ್ ಫಾಸಿಲ್ ಬಾಖವಿ ಅವರನ್ನು ಭೇಟಿ ಮಾಡಿ ಕ್ರಿಸ್ಮಸ್ ಸಂದೇಶ ಹಾಗೂ ಕ್ರಿಸ್ಮಸ್ ತಿಂಡಿ ತಿನಿಸುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಚರ್ಚಿನ ಉಪಾಧ್ಯಕ್ಷರಾದ ಡೆನಿಸ್ ಅಂತೇರೋ ಚರ್ಚ್ ಪಾಲನ ಮಂಡಳಿಯ ಸದಸ್ಯರಾದ ವಿಲಿಯಂ ಡಿಸೋಜಾ ಎಡ್ವರ್ಡ್ ಡಿಸೋಜಾ ಬಾಜಿಲ್ ರಾಜೇಂದ್ರ ಹಾಗೂ ಪ್ರವೀಣ್ ಡಿಸೋಜ ವಿಲ್ಫ್ರೆಡ್ ಡಿಸೋಜಾ ಉಪಸ್ಥಿತರಿದ್ದರು.