May 1, 2026

ಉಡುಪಿ: ಪ್ರವಾಸಕ್ಕೆ ತೆರಳಿದ್ದ ಸಂದರ್ಭ ಹೃದಯಾಘಾತ: ಐಎಫ್‌ಎಸ್ ಅಧಿಕಾರಿ ಮೃತ್ಯು

0
image_editor_output_image1782870696-1744015702658.jpg

ಉಡುಪಿ: ಐಎಫ್‌ಎಸ್ ಅಧಿಕಾರಿ, ಅರಣ್ಯ ಇಲಾಖೆಯಲ್ಲಿ ಉಪ ಸಂರಕ್ಷಣಾಧಿಕಾರಿಯಾಗಿದ್ದ ಉದಯ ಜೋಗಿ (59) ಅವರು ಕುಟುಬಸ್ಥರು ಹಾಗೂ ಸ್ನೇಹಿತರೊಂದಿಗೆ ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ. ಪುತ್ರರಿಬ್ಬರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮೂಲತಃ ಬೈಂದೂರು ಸೋಮೇಶ್ವರದ ನಿವಾಸಿಯಾಗಿದ್ದ ಅವರು ಪ್ರಸ್ತುತ ಮಣಿಪಾಲದಲ್ಲಿ ನೆಲೆಸಿದ್ದರು. ಅರಣ್ಯ ಉಪ ಸಂರಕ್ಷಣಾಧಿಕಾರಿ ಹುದ್ದೆಯ ಜತೆಗೆ 2017 ರಿಂದ ಗೇರು ಅಭಿವೃದ್ಧಿ ನಿಗಮದ ಮಂಗಳೂರಿನ ವಿಭಾಗಾಧಿಕಾರಿಯಾಗಿ ಪ್ರಭಾರ ನೆಲೆಯಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!