December 15, 2025

ಕರಾವಳಿಯಲ್ಲೂ ಸಂಭ್ರಮದ ಕ್ರಿಸ್‌ಮಸ್ ಆಚರಣೆ: ಚರ್ಚ್ ಗಳಲ್ಲಿ ವಿಶೇಷ ಬಲಿ ಪೂಜೆ

0
image_editor_output_image250377152-1703486628375.jpg

ಮಂಗಳೂರು : ಯೇಸು ಕ್ರಿಸ್ತರ ಜನನದ ದಿನವಾದ ಡಿ.25 ರಂದು ಕ್ರಿಸ್ಮಸ್ ಹಬ್ಬವನ್ನು ಜಗತ್ತಿನಾದ್ಯಂತ ಇಂದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಕರಾವಳಿಯಲ್ಲೂ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸಂಭ್ರಮದ ವಾತಾವರಣ ಮನೆ ಮಾಡಿದೆ.

ಕರಾವಳಿಯ ಪ್ರಮುಖ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲೂ ಕ್ರಿಸ್ ಹಬ್ಬದ ಸಂಭ್ರಮ ಮುಗಿಲು ಮುಟ್ಟಿತ್ತು. ಅವಿಭಾಜ್ಯ ದಕ್ಷಿಣ ಕನ್ನ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರ ಮಂಗಳೂರಿನ ಕ್ರೈಸ್ತ ದೇವಾಲಯಗಳಲ್ಲಿ ಮತ್ತು ಕ್ರೈಸ್ತರ ಮನೆ ಮನಗಳಲ್ಲಿ ಹಬ್ಬದ ಸಡಗರದ ವಾತಾವರಣ ನೆಲೆಸಿದೆ.

ಕ್ರಿಸ್ಮಸ್ ಆಚರಣೆಯ ಮುನ್ನಾ ದಿನವಾದ ಭಾನುವಾರ ರಾತ್ರಿ ಮಂಗಳೂರಿನ ಅತೀ ಹಿರಿಯ ಚರ್ಚ್ ಆಗಿರುವ ರೊಸಾರಿಯೊ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಬಲಿಪೂಜೆ ನೆರವೇರಿತು.

ಮಂಗಳೂರು ಧರ್ಮಪ್ರಾಂತ್ಯದ ಬಲಿಪೂಜೆ ನೆರವೇರಿಸಿ, ಕ್ರಿಸ್ಮಸ್ ಹಬ್ಬದ ಸಂದೇಶದೊಂದಿಗೆ, ಆಶಿರ್ವಚನ ನೀಡಿದರು. ದೇವರು ನೀಡಿದ ಉದಾತ್ತ ವಿಚಾರಗಳಾದ ಎಲ್ಲರನ್ನೂ ಪ್ರೀತಿಸುವ, ಸಹಕಾರ, ತಾಳ್ಮೆ, ಕುಟುಂಬ ವ್ಯವಸ್ಥೆಯಲ್ಲಿ ಅನ್ಯೋನ್ಯತೆ, ಕ್ಷಮೆ, ವಿನಯತೆಯಂತಹ ವಿಚಾರಗಳನ್ನು ಮೈಗೂಡಿಸಿಕೊಂಡು ದೇವರೊಂದಿಗೆ ಬದುಕು ಸವಿಸಲು ಮುಂದಾಗಬೇಕು.

ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ನಿವೃತ್ತ ಬಿಷಪ್ ಡಾ. ಅಲೋಶಿಯಸ್ ಪಾವ್ಸ್ ಡಿಜೋಜಾ ಅವರು ವಿಶೇಷ ಪೂಜೆ ನೆರವೇರಿಸಿ ಕ್ರಿಸ್ಮಸ್ ಸಂದೇಶ ನೀಡಿದರು. ನಗರದ ಪ್ರಮುಖ ಚರ್ಚ್‌ಗಳಾದ ಮಿಲಾಗ್ರಿಸ್, ಲೇಡಿಹಿಲ್, ಅಶೋಕನಗರ, ಕೂಳೂರು, ಬೆಂದೂರ್, ಬಾಲೇಸು ಮತ್ತಿತರ ಚರ್ಚ್‌ಗಳಲ್ಲಿ ಭಕ್ತರು ಬಲಿಪೂಜೆಯಲ್ಲಿ ಸಂಭ್ರಮದಿಂದ ಭಾಗವಹಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!