ಮಂಗಳೂರು: ರಸ್ತೆಯ ಹೊಂಡಕ್ಕೆ ಬಿದ್ದ ಬೈಕ್: ಸವಾರನಿಗೆ ಗಾಯ
ಮಂಗಳೂರು: ಹೊಂಡಕ್ಕೆ ಬಿದ್ದು ಬೈಕ್ ಸವಾರನೊಬ್ಬ ಗಾಯಗೊಂಡ ಘಟನೆ ನಗರದ ಕೆಎಸ್ ರಾವ್ ರಸ್ತೆಯಲ್ಲಿ ನಡೆದಿದೆ.
ರಸ್ತೆಯನ್ನು ಅಗೆದು ಹಾಕಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿಯನ್ನು ನಡೆಸಲಾಗುತ್ತಿದೆ.
ಕಾಮಗಾರಿ ನಡೆದು ಹಲವು ಸಮಯ ಕಳೆದರೂ ಸಿಟಿ ಸೆಂಟರ್ ಮುಂಭಾಗದ ಅನತಿ ದೂರದ, ಜನನಿಬಿಡ ರಸ್ತೆಯ ಈ ಅಪಾಯಕಾರಿ ಹೊಂಡವನ್ನು ಮುಚ್ಚಿರಲಿಲ್ಲ. ಇದೀಗ ಇದೇ ಹೊಂಡಕ್ಕೆ ಭಾನುವಾರ ರಾತ್ರಿ ಬೈಕ್ ಸವಾರನೊಬ್ಬ ಬಿದ್ದು ಗಾಯಗೊಂಡಿದ್ದು, ಬಳಿಕ ಸ್ಥಳೀಯರೇ ಎತ್ತಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.





