ನವೀನ್ ಡಿ. ಪಡೀಲ್ ಗೆ ಶ್ರೇಷ್ಠ ನಟ ಪ್ರಶಸ್ತಿ
ಮಂಗಳೂರು: ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರ ಅಕಾಡೆಮಿಯ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕುಸಲ್ದರಸೆ ನವೀನ್ ಡಿ. ಪಡೀಲ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿದೆ.
ಸಂತೋಷ್ ಮಾಡ ನಿರ್ದೇಶಿಸಿದ ಮೊದಲ ಅರೆ ಭಾಷೆ ಚಿತ್ರ ಮೂಗಜ್ಜನ ಕೋಳಿ ಚಿತ್ರದಲ್ಲಿ ಮುಖ್ಯಭೂಮಿಕೆಯಾದ ಮೂಗಜ್ಜನ ಪಾತ್ರಕ್ಕೆ ನವೀನ್ ಡಿ. ಪಡೀಲ್‌ಗೆ ಶ್ರೇಷ್ಠ ನಟ ಪ್ರಶಸ್ತಿ ದೊರಕಿದೆ. ಇಡೀ ಸಿನಿಮಾದಲ್ಲಿ ಒಂದೇ ಒಂದು ಮಾತಿಲ್ಲದ, ಕೋಳಿಗಳನ್ನು ಪ್ರೀತಿಸುವ ಒರಟು ಮುದುಕನ ಪಾತ್ರದಲ್ಲಿ ಪಡೀಲ್ ಮನೋಜ್ಞವಾಗಿ ನಿಭಾಯಿಸಿದ್ದಾರೆ.





