ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

ಕಲಬುರಗಿ: ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚೌಕಿ ತಾಂಡಾದ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.
ಚಿತ್ತಾಪುರ ತಾಲೂಕಿನ ಚೌಕಿ ತಾಂಡಾದ ಆಕಾಶ್ (18), ರಾಧಿಕಾ (15) ಎಂಬ ಇಬ್ಬರು ಪ್ರೇಮಿಗಳು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಆಕಾಶ್ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದ ನಿವಾಸಿಯಾಗಿದ್ದು, ರಾಧಿಕಾ ರಾಂಪೂರ್ ಹಳ್ಳಿ ನಿವಾಸಿಯಾಗಿದ್ದಳು.
ಇಬ್ಬರು ಪ್ರೇಮಿಗಳು ಅಕ್ಕ ಪಕ್ಕದ ನಿವಾಸಿಗಳಾಗಿದ್ದು, ಕಳೆದೊಂದು ವರ್ಷದಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.