March 18, 2026

ಸುಳ್ಯ: ಬಳ್ಪ ಕಮಿಲ ರಸ್ತೆ ಬದಿಯಲ್ಲಿ 30ಕ್ಕೂ ಹೆಚ್ಚು ಮಂಗಗಳ ಮೃತದೇಹವು ಪತ್ತೆ

0
image_editor_output_image794905860-1702621636906.jpg

ಸುಳ್ಯ: ಬಳ್ಪ ಕಮಿಲ ಕ್ರಾಸ್ ಸಮೀಪದ ಕಾಡಿನ ರಸ್ತೆ ಬದಿಯಲ್ಲಿ 30ಕ್ಕೂ ಅಧಿಕ ಮಂಗಗಳ ಮೃತದೇಹವು ಎಸೆದಿರುವುದು ಪತ್ತೆಯಾಗಿದೆ.

ಮಂಗಗಳ ಮಾರಣಹೋಮವು ಜನರಲ್ಲಿ ಅಚ್ಚರಿ ಮೂಡಿಸಿದೆ. ರಸ್ತೆ ಬದಿಯಲ್ಲಿ ಎಸೆದವರ ವಿರುದ್ಧ ಅರಣ್ಯ ಇಲಾಖೆಯವರು ಕನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗುರುವಾರ ಮಧ್ಯಾಹ್ನದ ವೇಳೆ ಸಾಮಾಜಿಕ ಜಾಲತಾಣದ ಮೂಲಕ ಮಂಗಗಳ ಶವ ಇರುವುದು ಬೆಳಕಿಗೆ ಬಂದಿದೆ. ಆ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಮಂಗಗಳನ್ನು ಕೊಂದು ಕಾಡೊಳಗೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ. ಇದೀಗ ಮಂಗಗ ಶವವನ್ನು ಯೇನೆಕಲ್ಲು ನರ್ಸರಿಗೆ ಸಾಗಾಟ ಮಾಡಿದ್ದು, ಶುಕ್ರವಾರ ಶವಗಳ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕವೇ ಮಂಗಗಳ ಸಾವಿಗೆ ಕಾರಣ ತಿಳಿದುಬರಲಿದೆ.

ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ. ಮಂಗಗಳ ಮಾರಣಹೋಮದ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!