May 9, 2026

ಉಳ್ಳಾಲ: ಅಕ್ರಮ ಸಾರಾಯಿ ಘಟಕಕ್ಕೆ ದಾಳಿ: 2240 ಲೀಟರ್ ಸ್ಪಿರಿಟ್, 222 ಲೀಟರ್ ನಕಲಿ ಲಿಕ್ಕರ್ ವಶ

0
image_editor_output_image2071205763-1702444624687.jpg

ಉಳ್ಳಾಲ: ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮ ಸಾರಾಯಿ ಘಟಕಕ್ಕೆ ದಾಳಿ ಮಾಡಿ 2240 ಲೀಟರ್ ಸ್ಪಿರಿಟ್ ಮತ್ತು 222 ಲೀಟರ್ ನಕಲಿ ಲಿಕ್ಕರ್ ವಶಪಡಿಸಿಕೊಂಡ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕಿನ್ಯಾ ಗ್ರಾಮದ ಸಾಂತ್ಯಗುತ್ತು ಬಳಿ ನಡೆದಿದೆ.

ಸಾಂತ್ಯಗುತ್ತು ನಿವಾಸಿ ನಿತ್ಯಾನಂದ ಭಂಡಾರಿ ಎಂಬಾತನ ಮನೆಗೆ ದಾಳಿ ನಡೆದಿದೆ. ಕಿನ್ಯಾದಲ್ಲಿ ಸ್ಪಿರಿಟ್ ಮಾರಾಟ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡಿದ್ದಾರೆ.

ಕೇರಳಕ್ಕೆ ಸಾಗಿಸಲು ಆರೋಪಿ ಈ ದಂಧೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!