March 18, 2026

ಮಂಗಳೂರು: ಮಂಗಳಾ ಈಜುಕೊಳದಲ್ಲಿ ಮುಳುಗಿ ಯುವಕ ಮೃತ್ಯು

0
image_editor_output_image-120613561-1702445114348.jpg

ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದ ಈಜುಕೊಳದಲ್ಲಿ ಈಜಾಡುತ್ತಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿ.12ರ ಮಂಗಳವಾರ ಸಂಜೆ ನಡೆದಿದೆ.

ಹರ್ಯಾಣ ಮೂಲದ ಅಭಿಷೇಕ್ ಆನಂದ್ (30)ಮೃತ ದುರ್ದೈವಿ. ಸಂಜೆ ಸುಮಾರು 4:45 ರಿಂದ 5:30ರವರೆಗೆ ಈ ಈಜುಕೊಳದಲ್ಲಿ ಸಾರ್ವಜನಿಕರಿಗೆ ಈಜಲು ಪ್ರವೇಶವಿದೆ. ಮಂಗಳವಾರ ಸಂಜೆ ಅಂದರೆ ನಿನ್ನೆ 4:30ರ ವೇಳೆಗೆ ಅಭಿಷೇಕ್ ಟಿಕೆಟ್ ಪಡೆದುಕೊಂಡು 4:45ರ ವೇಳೆಗೆ ಈಜುಕೊಳಕ್ಕೆ ಇಳಿದಿದ್ದ. 5:05ಕ್ಕೆ ನೀರಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.

ಈ ವೇಳೆ ಸುಮಾರು 30ಕ್ಕೂ ಅಧಿಕ ಮಂದಿ ಈಜಾಡುತ್ತಿದ್ದರೂ ಯಾರಿಗೂ ಅಭಿಷೇಕ್ ಮುಳುಗಿದ್ದು ಅರಿವಿಗೆ ಬರಲಿಲ್ಲ ಎಂದು ಹೇಳಲಾಗುತ್ತಿದೆ. ಹುಡುಗನೊಬ್ಬ ಈಜಾಡುತ್ತಾ ಹೋಗುತ್ತಿದ್ದಾಗ ನೀರಿನಡಿ ದೇಹವೊಂದು ಕಾಣಸಿಕ್ಕಿದ್ದು ತಕ್ಷಣ ಆತ ಲೈಫ್‌ಗಾರ್ಡ್‌ಗಳಿಗೆ ಮಾಹಿತಿ ನೀಡಿದ. ಈ ವೇಳೆ ಈಜುಕೊಳದಲ್ಲಿ ಕಾರ್ಯನಿರತರಾಗಿದ್ದ ರಾಜೇಂದ್ರ ಮತ್ತು ಪುಂಡಲೀಕ ಎಂಬ ಲೈಫ್‌ ಗಾರ್ಡ್‌ಗಳು ಈಜುಕೊಳಕ್ಕೆ ಹಾರಿ ಅಭಿಷೇಕ್‌ನನ್ನು ಮೇಲಕ್ಕೆತ್ತಿದರೂ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!