March 18, 2026

ಒಡಿಯೂರು ಗ್ರಾಮ ವಿಕಾಸ ಯೋಜನೆ ಕೊಳ್ನಾಡು, ಮಂಕುಡೆ ಘಟ ಸಮಿತಿ ವತಿಯಿಂದ ಶ್ರಮ ಸೇವೆ

0
image_editor_output_image58872090-1702381258319

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕೊಳ್ನಾಡು ಗ್ರಾಮ ಸಮಿತಿ ಮತ್ತು ಮಂಕುಡೆ ಘಟ ಸಮಿತಿ ಇದರ ವತಿಯಿಂದ ದ. ಕ. ಜಿ. ಪ. ಉ. ಪ್ರಾ. ಶಾಲೆ ಮಂಕುಡೆ ಇದರ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶ್ರಮ ಸೇವೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷರಾದ ಶ್ರೀಧರ್ ಪೂಂಜ, ಸಂಘಟನಾ ಕಾರ್ಯದರ್ಶಿಯಾದ ಪರಮೇಶ್ವರ ಆಚಾರ್ಯ ಮಂಕುಡೆ, ಶ್ರೀ ಮಹಮ್ಮಾಯೀ ಭಜನಾ ಮಂಡಳಿ, ನಾಗವನ – ಕುಂಟ್ರಕಲ ಇದರ ಪ್ರಮುಖರಾದ ಜಯರಾಮ್ ನಾಯ್ಕ್ ಕುಂಟ್ರಕಲ, ಹಳೆ ವಿದ್ಯಾರ್ಥಿ ಯುವಕ ಮಂಡಲ ಮಂಕುಡೆ ಇದರ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ, ಮಂಕುಡೆ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ಇಂದುಶೇಖರ ಮತ್ತು ಶಿಕ್ಷಕರ ವೃಂದ, ಘಟಸಮಿತಿಯ ಉಪಾಧ್ಯಕ್ಷರಾದ ಜಗನ್ನಾಥ್ ಶೆಟ್ಟಿ, ಕಾರ್ಯದರ್ಶಿಯಾದ ಉಮೇಶ್ ನಾಯ್ಕ್, ಜೊತೆ ಕಾರ್ಯದರ್ಶಿಯಾದ ಪ್ರೇಮ ಯಸ್. ಪೂಂಜ, ಹಾಗು ಸಂಘಟನಾ ಕಾರ್ಯದರ್ಶಿಯಾದ ಶ್ರಾವ್ಯ ಶೆಟ್ಟಿ ಉಪಸ್ಥಿತರಿದ್ದರು.


ಗ್ರಾಮ ವಿಕಾಸ ಯೋಜನೆಯ ಸಂಯೋಜಕರಾದ ಲೀಲಾ ಕೆ., ಸೇವಾ ದೀಕ್ಷಿತರಾದ ಶ್ವೇತಾ ಶೆಟ್ಟಿ ಮತ್ತು ಕುಮಾರಿ ಅರ್ಪಿತ ಸಹಕರಿಸಿದರು. ವಿಕಾಸವಾಹಿನಿಯ ಸುಮಾರು 55 ಸದಸ್ಯರು ಈ ಶ್ರಮ ಸೇವೆಯಲ್ಲಿ ಭಾಸಗವಹಿಸಿದರು.
ಶಾಂತಿ ಮಂತ್ರದಿಂದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!