ಜಿ ಎಚ್ ಎಮ್ ಫೌಂಡೇಶನ್ ಮೂಲರಪಟ್ಣ ವತಿಯಿಂದ ಪೋಷಕರ, ವಿದ್ಯಾರ್ಥಿಗಳಿಗೆ ಜೊತೆ 1 ದಿನದ ನೇರ ಸಂವಾದ ಕಾರ್ಯಕ್ರಮ
ಬಂಟ್ವಾಳ: ಜಿ ಎಚ್ ಎಮ್ ಫೌಂಡೇಶನ್ ಮೂಲರಪಟ್ಣ
ಇದರ ವತಿಯಿಂದ ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ಅಂಕ ಉನ್ನತೀಕರಣದ ಅಂಗವಾಗಿ ಪೋಷಕರು, ವಿದ್ಯಾರ್ಥಿಗಳಿಗೆ ಜೊತೆ 1 ದಿನದ ನೇರ ಸಂವಾದ ಕಾರ್ಯಕ್ರಮ ಸೋಮವಾರ ಮೌಲಾನ ಅಝಾದ್ ಮಾದರಿ ಶಾಲೆ ಮೂಲರಪಟ್ಣ ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಜಿ ಎಚ್ ಎಮ್ ಫೌಂಡೇಶನ್ ಮೂಲರಪಟ್ಣ ಇದರಅಧ್ಯಕ್ಷ ಮೊಹಮ್ಮದ್ ಶಾಲಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಇಮ್ತಿಯಾಜ್ ಶಾ ತುಂಬೆ, ಕೆ. ಮೊಹಮ್ಮದ್ ಅರ್ಫಾಝ್,
ರಘುರಾಮ್ ನಾಯಕ್
ಆಯಿಷಾ ಯು.ಕೆ ಮುಂತಾದ ವ್ಯಕ್ತಿಗಳು ವಿಧ್ಯಾರ್ಥಿಗಳಿಗೂ ಹಾಗೂ ಪೋಷಕರಿಗೂ ಮನಮುಟ್ಟುವಂತೆ ವಿವರಿಸಿದರು.
ಜಿ ಎಚ್ ಎಮ್ ಫೌಂಡೇಶನ್ (ರಿ) ಮೂಲರಪಟ್ಣ ಸಲಹೆಗಾರ ಎಮ್ ಬಿ ಅಶ್ರಫ್ ಮೂಲರಪಟ್ಣ, ಸ್ಥಾಪಕಾಧ್ಯಕ್ಷ ಹಂಝ ಗುತ್ತು, ಮೌಲಾನ ಅಝಾದ್ ಮಾದರಿ ಶಾಲೆ ಮೂಲರಪಟ್ಣ ಮುಖ್ಯ ಶಿಕ್ಷಕಿ ಸುಪ್ರಿತ ಸ.ಉ.ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕಿ ಶಾಹಿನಾ ಹಾಗೂ ಎಲ್ಲಾ ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಧ್ಯಾರ್ಥಿನಿ ತಾಜುನ್ನಿಸಾ ಸ್ವಾಗತಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ವಿಧ್ಯಾರ್ಥಿನಿ ಆಯಿಷಾ ಅಶ್ಪಿಯಾ ಧನ್ಯವಾದ ಸಲ್ಲಿಸಿದರು.10 ನೇ ತರಗತಿ ವಿದ್ಯಾರ್ಥಿನಿ ರಾಯಿಷ ಕಾರ್ಯಕ್ರಮ ನಿರೂಪಿಸಿದರು.






