March 18, 2026

ಎಚ್‌.ಡಿ ಕುಮಾರಸ್ವಾಮಿ ಬಳಿ ಕ್ಷಮೆಯಾಚಿಸಿದ ಪುನೀತ್ ಕೆರೆಹಳ್ಳಿ:
ಕುಮಾರಸ್ವಾಮಿಯನ್ನು ಟೀಕಿಸುವ ಗುಲಾಮರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದ ಪುನೀತ್

0
pro.webp

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಬಳಿ ರಾಷ್ಟ್ರರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಕ್ಷಮೆಯಾಚಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಜೈ ಶ್ರೀ ರಾಮ್ ಹೇಳಿದ ಕುಮಾರಸ್ವಾಮಿ ಅವರು ಧರ್ಮದ ಪರ ನಿಂತಿದ್ದಾರೆ. ಅವರನ್ನು ಟೀಕಿಸುವ ಗುಲಾಮರಿಗೆ ನಾವು ತಕ್ಕ ಉತ್ತರ ಕೊಡುತ್ತೇವೆ. ನಿಮ್ಮ ಬಗ್ಗೆ ನಾವು ಏನಾದರೂ ತಿಳಿಯದೆ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದರೆ ಕ್ಷಮೆ ಕೋರುತ್ತೇವೆ’ ಎಂದು ಬರೆದುಕೊಂಡಿದ್ದಾರೆ. ಧರ್ಮದ ಪರ ನಿಂತವರ ಹಿಂದೆ ಖಂಡಿತ ನಾವೆಲ್ಲ ಇರುತ್ತೇವೆ ಎಂದು ಕುಮಾರಸ್ವಾಮಿ ಭಾಷಣದ ತುಣುಕಿನೊಂದಿಗೆ ಪುನೀತ್ ಕೆರೆಹಳ್ಳಿ ತಿಳಿಸಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಅವರು ಕಲ್ಲಡ್ಕ ಪ್ರಭಾಕರ್ ಅವರ ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.

ಈ ಮಧ್ಯೆ ಕಲ್ಲಡ್ಕ ಪ್ರಭಾಕರ್ ಅವರ ಕುರಿತು ನನಗೆ ಕೆಲವರು ದಾರಿತಪ್ಪಿಸುವ ವಿಚಾರಗಳನ್ನು ತಲೆಗೆ ತುಂಬಿದ್ದರು . ಆದರೆ ಇಂದು ನನ್ನ ಕಣ್ಣು ತೆರೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಲ್ಲಡ್ಕ ಪ್ರಭಾಕರ್ ಅವರನ್ನು ಹಾಡಿ ಹೊಗಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!