March 18, 2026

ಛತ್ತೀಸ್ ಗಡ: ನೂತನ ಮುಖ್ಯಮಂತ್ರಿಯಾಗಿ ಮಾಜಿ ಕೇಂದ್ರ ಸಚಿವ ವಿಷ್ಣು ದಿಯೋ ಸಾಯಿ ಆಯ್ಕೆ

0
steel-and-mines-minister-vishnu-deo-sai-demands-better-rail-network-in-chhattisgarh-jharkhand.jpg

ರಾಯ್ಪುರ: ಛತ್ತೀಸ್ ಗಢದ ನೂತನ ಮುಖ್ಯಮಂತ್ರಿಯಾಗಿ ಮಾಜಿ ಕೇಂದ್ರ ಸಚಿವ ವಿಷ್ಣು‌ ದಿಯೋ ಸಾಯಿ ಆಯ್ಕೆಯಾಗಿದ್ದಾರೆ. ಬಿಜೆಪಿ ವೀಕ್ಷಕರ ಸಮ್ಮುಖದಲ್ಲಿ ನಡೆದ ಶಾಸಕರ ಸಭೆಯಲ್ಲಿ ಸಿಎಂ ಹುದ್ದೆಗೆ ವಿಷ್ಣು ದಿಯೋ ಸಾಯಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಶಾಸಕಾಂಗ ಸಭೆಯಲ್ಲಿ ಬಿಜೆಪಿ ಹೈಕಮಾಂಡ್ ಕಳಿಸಿದ್ದ ವೀಕ್ಷಕರ ತಂಡ ವಿಷ್ಣು ದಿಯೋ ಸಾಯಿ ಅವರ ಹೆಸರನ್ನು ಸೂಚಿಸಿದ್ದು, ಶಾಸಕರು ಅದನ್ನು ಅನುಮೋದಿಸಿದ್ದಾರೆ. ಛತ್ತೀಸ್ ಗಢದ ರಾಯ್ಘರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವಿಷ್ಣು‌ದಿಯೋ ಸಾಯಿ, ಪ್ರಧಾನಿ ಮೋದಿ ಅವರ ಮೊದಲ ಅವಧಿಯಲ್ಲಿ ಉಕ್ಕು ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!