March 29, 2026

ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ:
ಯತ್ನಾಳ್ ವಿರುದ್ಧ ಕಾಂಗ್ರೆಸ್ ಟೀಕೆ

0
GA50Hs4WoAAUitL.jpeg

ಬೆಂಗಳೂರು: ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಸಮಾವೇಶದಲ್ಲಿ ಭಾಗಿಯಾಗಿದ್ದು, ವೇದಿಕೆ ಮೇಲೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಮೌಲ್ವಿ ತನ್ವೀರ್ ಹಾಸ್ಮಿ ಸಂಪರ್ಕ ಹೊಂದಿದ್ದಾರೆ ಎಂದು ಬಸನಗೌಡ ಪಾಟೀಲ ಆರೋಪಿಸಿದ್ದರು.

ಸಿದ್ದರಾಮಯ್ಯ ಮುಸ್ಲಿಂ ಮೌಲ್ವಿ ಮನೆಗೆ ಭೇಟಿ ನೀಡಿದ ವಿಡಿಯೋ ಹರಿಬಿಟ್ಟ ಯತ್ನಾಳ್‌ ಅವರಿಗೆ ಕಾಂಗ್ರೆಸ್‌, ಯತ್ನಾಳ್‌ ಅವರು ಮುಸ್ಲಿಂ ಟೋಪಿ ಹಾಕಿಕೊಂಡಿರುವ ಫೋಟೋ ಹಾಕಿ ಟಾಂಗ್‌ ಕೊಟ್ಟಿದೆ.

“ಮುಸ್ಲಿಮರೊಂದಿಗೆ ವ್ಯಾಪಾರ, ವ್ಯವಹಾರ. ಮುಸ್ಲಿಮರೊಂದಿಗೆ ಬದುಕು. ಹೊರಗೆ ಮಾತ್ರ ಮುಸ್ಲಿಮರ ಮೇಲೆ ದ್ವೇಷ ಭಾಷಣ. ಯತ್ನಾಳ್‌ ಅವರೇ, ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ! ನೀವು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿಕೊಂಡು, ಜನತೆಗೆ ದ್ವೇಷ ತುಂಬುವ ನಿಮ್ಮ ಬೂಟಾಟಿಕೆಯನ್ನು ಇನ್ನಾದರೂ ಬಿಡಿ” ಎಂದು ಟ್ವೀಟ್ ಮಾಡಿದೆ.

Leave a Reply

Your email address will not be published. Required fields are marked *

You may have missed

error: Content is protected !!