March 30, 2026

ಮಂಗಳೂರು: ಕುಡಿದು ವಾಹನ ಚಾಲನೆ:
ಸರಣಿ ಅಪಘಾತ-ಮಂಜೇಶ್ವರ ಮೂಲದ ಚಾಲಕ ವಶಕ್ಕೆ

0
image_editor_output_image1171136632-1701878954976

ಮಂಗಳೂರು: ಕಾರು ಚಾಲಕನೋರ್ವ ಕುಡಿದು ವಾಹನ ಚಲಾಯಿಸಿದ ಪರಿಣಾಮ ಸರಣಿ ಅಪಘಾತ ಉಂಟಾದ ಘಟನೆ ಜೆಪ್ಪು ಮಾರ್ನಮಿಕಟ್ಟೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ವಾಹನ ಚಾಲಕನನ್ನು ಮಂಜೇಶ್ವರ ಕಡಂಬಾರ್ ನಿವಾಸಿ ಅಕ್ಷಯ್ ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈತ ಕುಡಿದ ಮತ್ತಿನಲ್ಲಿ ಕೇರಳ ನೋಂದಾಯಿತ ಕಾರು ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಎರಡು ಕಾರು ಹಾಗೂ ಒಂದು ಸ್ಕೂಟರ್ ಗೆ ಢಿಕ್ಕಿ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಕದ್ರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರು ಚಾಲಕ ಅಕ್ಷಯ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!