May 9, 2026

ವಿಟ್ಲ: ಅಕ್ರಮವಾಗಿ ದಾಸ್ತಾನಿಟ್ಟಿದ್ದ ಮರಳು ಜಪ್ತಿ

0
image_editor_output_image487482203-1701845253272.jpg

ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮರಳನ್ನು ಜಪ್ತಿ ಮಾಡಲಾಗಿದೆ.

ಠಾಣಾ ಉಪ-ನಿರೀಕ್ಷಕರು ಹಾಗೂ ಸಿಬ್ಬಂದಿಗಳ ತಂಡ, ದಿನಾಂಕ 05.12.2023 ರಂದು ಸಂಜೆ, ಬಂಟ್ವಾಳ ತಾಲೂಕು, ಸಾಲೆತ್ತೂರು ಗ್ರಾಮದ ಬೊಳ್ಮಾರು ನಿವಾಸಿ ಸುದೇಶ್‌ ಭಂಡಾರಿ ಎಂಬವರ ಜಾಗದಲ್ಲಿ, ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಅಕ್ರಮವಾಗಿ ಶೇಖರಿಸಿರುವ, ಅಂದಾಜು 1.25 ಲಕ್ಷ ಮೌಲ್ಯದ ಸುಮಾರು 20 ರಿಂದ 25 ಲೋಡ್‌ ಮರಳನ್ನು ಪತ್ತೆಹಚ್ಚಿರುತ್ತಾರೆ.

ಮರಳನ್ನು ಅಕ್ರಮವಾಗಿ ಶೇಖರಣೆ ಮಾಡಿರುವ ಆರೋಪಿಗಳಾದ ಸುದೇಶ್‌ ಭಂಡಾರಿ, ಷರೀಪ್‌ ಮತ್ತು ನಾರಾಯಣ ಪೂಜಾರಿ ರವರ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 203/2023 ಕಲಂ: 379 R/W 34 IPC ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!