May 9, 2026

ಕಡಬ: ಕಾಡಾನೆ ದಾಳಿಗೆ ದನ ಸಾವು, ಜನರಲ್ಲಿ ಆತಂಕ

0
image_editor_output_image1733958827-1701843809691.jpg

ಕಡಬ: ಕಾಡಾನೆ ದಾಳಿಗೆ ದನವೊಂದು ಗಾಯಗೊಂಡು ಸಾವನಪ್ಪಿದ ಘಟನೆ ಕಡಬ ತಾಲೂಕು ಕೊಣಾಜೆಯ ಸಿ.ಆರ್.ಸಿ. ತಮಿಳು ಕಾಲೋನಿ ಬಳಿ ನಡೆದಿದೆ.

ಕೊಣಾಜೆ ದೊಡ್ಡಮನೆಯ ಅಶೋಕ ಎಂಬವರಿಗೆ ಸೇರಿದ ದನವನ್ನು ಮಂಗಳವಾರ ಮೇಯಲು ಬಿಟ್ಟಿದ್ದು, ಸಂಜೆ ಮನೆಯವರು ಹುಡುಕಾಡಿದಾಗ ದನ ಸಿಕ್ಕಿರಲಿಲ್ಲ.

ಬುಧವಾರ ಬೆಳಿಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ ದನ ತೋಟದಲ್ಲಿ ಗಾಯಗೊಂಡು ಸತ್ತು ಬಿದ್ದಿರುವುದು ಕಂಡುಬoದಿದೆ.

ತೋಟದಲ್ಲಿ ನೀರಾವರಿ ಪೈಪ್ ಗಳು ಹಾನಿಯಾಗಿದ್ದು, ರಾತ್ರಿ ವೇಳೆ ಆನೆ ಬಂದಿರುವ ಬಗ್ಗೆಯೂ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಸ್ವಷ್ಟ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!