August 22, 2026

ಮಂಗಳೂರು: 41 ಸಾವಿರ ಜನರ ಖಾತೆಗೆ 820 ಕೋಟಿ ರೂ. ಹಣ ವರ್ಗಾವಣೆ, ಯುಕೋ ಬ್ಯಾಂಕ್ ನ ಮೇಲೆ ಸಿಬಿಐ ದಾಳಿ

0
image_editor_output_image1916239241-1701843686026.jpg

ಮಂಗಳೂರು: ಖಾಸಗಿ ಬ್ಯಾಂಕೊಂದರ 14 ಸಾವಿರ ಜನರ ಖಾತೆಯಿಂದ ಯುಕೋ ಬ್ಯಾಂಕ್‌ನ 41 ಸಾವಿರ ಜನರ ಖಾತೆಗೆ 820 ಕೋಟಿ ರೂಪಾಯಿ ಹಣ ವರ್ಗಾವಣೆ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು, ಕೋಲ್ಕತಾ ಸೇರಿದಂತೆ ದೇಶದ 13 ಸ್ಥಳಗಳ ಮೇಲೆ ಸಿಬಿಐ ಸೋಮವಾರ ದಾಳಿ ನಡೆಸಿದೆ.

ಈ ಪ್ರಕರಣದಲ್ಲಿ ಇಬ್ಬರು ಎಂಜಿನಿಯರ್‌ಗಳು ಶಾಮೀಲಾದ ಶಂಕೆ ಇದೆ. ಹೀಗಾಗಿ ಖುದ್ದು ಯುಕೋ ಬ್ಯಾಂಕ್ ನೀಡಿದ ದೂರಿನ ಮೇರೆಗೆ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡು ದಾಳಿ ಮಾಡಿದೆ. ದಾಳಿ ವೇಳೆ ಕಂಪ್ಯೂಟರ್, ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್, ಲ್ಯಾಪ್‌ಟಾಪ್, ಇ-ಮೇಲ್ ಆರ್ಕೈವ್‌ಗಳು, ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದೆ.

Leave a Reply

Your email address will not be published. Required fields are marked *

You may have missed

error: Content is protected !!