ಕಲ್ಲಡ್ಕದ RSS ಮುಖಂಡ ಪ್ರಭಾಕರ ಭಟ್ ಶಾಲೆಯ ಕ್ರೀಡೋತ್ಸವಕ್ಕೆ ಮುಖ್ಯ ಅತಿಥಿಯಾಗಿ JDS ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ
ಬಂಟ್ವಾಳ: ಆರ್‌ಎಸ್ ಎಸ್ ಹಿರಿಯ ನಾಯಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸಾರಥ್ಯದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮೀ ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಗುರುತಿಸಲ್ಪಡುವ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ( ರಿ.) ಕಲ್ಲಡ್ಕ, ಇಲ್ಲಿನ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿ.9 ರಂದು ನಡೆಯುವ ಹೊನಲು ಬೆಳಕಿನ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಆದರೆ ಕಳೆದ ಅನೇಕ ವರ್ಷಗಳ ಕ್ರೀಡೋತ್ಸವವನ್ನು ಗಮನಿಸಿದಾಗ ಈ ಬಾರಿ ಮೃದು ಹಿಂದುತ್ವದತ್ತ ವಾಲಿದ, ಬಿಜೆಪಿ ಜೊತೆ ಹೊಂದಾಣಿಕೆಗೆ ಮುಂದಾಗಿರುವ ಮತ್ತು ದತ್ತ ಪೀಠಕ್ಕೆ ಮಾಲಾಧಾರಣೆ ಮಾಡಿ ಹೋಗುವುದಾಗಿ ಹೇಳಿಕೆ ನೀಡಿ ರಾಜ್ಯದಲ್ಲಿ ಒಂದು ರೀತಿಯ ಬಿರುಗಾಳಿ ಎಬ್ಬಿಸಿರುವ ಕುಮಾರ ಸ್ವಾಮಿ ಆಗಮನ ರಾಜಕೀಯ ವಲಯದಲ್ಲಿ ಒಂದಷ್ಟು ಸಂಚಲನ ಮೂಡಿಸಿದೆ.




