March 18, 2026

ನೆಲ್ಯಾಡಿ: ಲಾರಿಗೆ ಅಪರಿಚಿತ ವಾಹನ ಢಿಕ್ಕಿ: ಚಾಲಕ ಸಹಿತ ಇಬ್ಬರು ಸ್ಥಳದಲ್ಲೇ ಸಾವು

0
image_editor_output_image572446135-1701845856199.jpg

ನೆಲ್ಯಾಡಿ : ಲಾರಿಯೊಂದಕ್ಕೆ ಯಾವುದೋ ವಾಹನ ಡಿಕ್ಕಿಯಾಗಿ ಪರಾರಿಯಾದ ಘಟನೆ ಶಿರಾಡಿ ಘಾಟ್ ನ ಗುಂಡ್ಯ ಗಡಿ ದೇವಸ್ಥಾನಕ್ಕಿಂತ ಮೇಲೆ ಕೆಂಪು ಹೊಳೆ ಬಳಿ ನಡೆದಿದೆ.

ಅಪಘಾತದಲ್ಲಿ ಮಿನಿ ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮಿನಿ ಲಾರಿ ಹಾಸನದಿಂದ ಮಂಗಳೂರಿಗೆ ಬರುತ್ತಿತ್ತು. ಶಿರಾಡಿ ಘಾಟ್ ನ ಕೆಂಪು ಹೊಳೆ ಸಮೀಪ ಯಾವುದೋ ಘನ ವಾಹನ ಡಿಕ್ಕಿಯಾಗಿ ಪರಾರಿಯಾಗಿದೆ. ಘಟನೆಯಲ್ಲಿ ಮಿನಿ ಲಾರಿ ಸಂಪೂರ್ಣ ಜಖಂಗೊಂಡಿದೆ.

ಘಟನಾ ಸ್ಥಳಕ್ಕೆ ಸಕಲೇಶಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!