March 18, 2026

ಬೆಳ್ತಂಗಡಿ: ಎಕ್ಸೆಲ್ ಕಾಲೇಜಿನ 11 ಮಂದಿ ವಿದ್ಯಾರ್ಥಿಗಳು ನಾಪತ್ತೆ:
ಕಿರುಕುಳದಿಂದ ಗೋವಾಕ್ಕೆ ಪ್ರಯಾಣ ಬೆಳೆಸಿದ ವಿದ್ಯಾರ್ಥಿಗಳು

0
IMG-20231201-WA0018.jpg

ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಖಾಸಗಿ ಕಾಲೇಜಿನ 11 ಮಂದಿ ವಿದ್ಯಾರ್ಥಿಗಳು ಏಕಾಏಕಿ ಕಿರುಕುಳದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಪತ್ತೆಯಾಗಿದ್ದು, ಕಾಲೇಜಿಗೆ ಕರೆತರುತ್ತಿದ್ದಾರೆ ಎಂಬ ಮಾಹಿತಿ ಇದೆ‌.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ಎಕ್ಸೆಲ್ ಪಿಯು ಕಾಲೇಜಿನ 11 ಮಂದಿ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು ನ.30 ರಂದು ರಾತ್ರಿ ಏಕಾಏಕಿ ನಾಪತ್ತೆಯಾಗಿದ್ದರು. ಮಾಹಿತಿ ಪ್ರಕಾರ ಆ 11 ಜನ ವಿದ್ಯಾರ್ಥಿಗಳನ್ನು ಮನೆಯವರು ಒತ್ತಾಯಪೂರ್ವಕವಾಗಿ ಕಾಲೇಜಿಗೆ ಸೇರ್ಪಡೆ ಮಾಡಿದ್ದು, ಅದಲ್ಲದೆ ಕಾಲೇಜಿನಲ್ಲಿ ಕೂಡ ಕಿರುಕುಳ ನೀಡುತ್ತಿದ್ದಕ್ಕೆ ಜೊತೆಯಾಗಿ ಗೋವಾಕ್ಕೆ ಹೋಗಿ ನಾಪತ್ತೆಯಾಗಲು ರೂಪುರೇಷೆ ಸಿದ್ದಪಡಿಸಿ ಹಾಸ್ಟೆಲ್ ನಿಂದ ನ. 30 ರಂದು ರಾತ್ರಿ ನಾಪತ್ತೆಯಾಗಿದ್ದರು.

ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡದೆ ತಮ್ಮ ಕಾಲೇಜಿನ ಮರ್ಯಾದಿಗೆ ಅಂಜಿ ವಿದ್ಯಾರ್ಥಿಗಳ ಪೋಷಕರೆ ಜೊತೆಯಾಗಿ ಮಾತುಕತೆ ನಡೆಸಿ ಗೌಪ್ಯವಾಗಿ ಹುಡುಕಾಟ ನಡೆಸಿದ್ದರು. ಡಿ.1 ರಂದು ಸಂಜೆ ವೇಳೆ ಕಾಲೇಜಿನ ಆಡಳಿತ ಮಂಡಳಿ ಗೌಪ್ಯವಾಗಿ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಕಾರವಾರದಲ್ಲಿ ರೈಲಿನ ಮೂಲಕ ಗೋವಾಕ್ಕೆ ಹೋಗುವಾಗ ಪತ್ತೆ ಹಚ್ಚಿದ್ದು. ಎಕ್ಸೆಲ್ ಹಾಸ್ಟೆಲ್ ಗೆ ಕರೆತರುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!