ಪ್ರಿಯಕರನ ಮೊಬೈಲ್‌ನಲ್ಲಿ 13 ಸಾವಿರ ಯುವತಿಯರ ನಗ್ನ ಫೋಟೋ: ಮಂಗಳೂರು ಮೂಲದ ಯುವಕನ ಬಂಧನ
ಬೆಂಗಳೂರು: ತನ್ನ ಪ್ರಿಯಕರನ ಮೊಬೈಲ್‌ನಲ್ಲಿ 13 ಸಾವಿರ ಯುವತಿಯರ ನಗ್ನ ಫೋಟೋಗಳನ್ನು ಕಂಡ ಪ್ರೇಯಸಿಯೊಬ್ಬಳು ಶಾಕ್ ಆಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 22 ವರ್ಷದ ಯುವತಿ, ತನ್ನ ಸಹೋದ್ಯೋಗಿ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಆಗಾಗ್ಗೆ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ.
ಅದನ್ನು ಪ್ರಿಯಕರ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದ. ಅದನ್ನು ಗಮನಿಸಿದ ಯುವತಿ, ಆತ ಶೌಚಾಲಯಕ್ಕೆ ಹೋದಾಗ ಆತನ ಮೊಬೈಲ್ ತೆಗೆದುಕೊಂಡು ಡಿಲೀಟ್ ಮಾಡಲು ಮುಂದಾಗಿದ್ದಾಳೆ.
ಆಗ ಆತನ ಮೊಬೈಲ್ ನಲ್ಲಿ ಬರೋಬರಿ 13 ಸಾವಿರ ಯುವತಿಯ ನಗ್ನ ಫೋಟೋಗಳು, ವಿಡಿಯೋ ಗಳು ಕಂಡು ಬೆಚ್ಚಿ ಬಿದ್ದಿದ್ದಾಳೆ. ವಿಪರ್ಯಾಸವೆಂದರೆ ಈ ಪೈಕಿ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಹಲವು ಯುವತಿಯ ಮಾದಕ ಚಿತ್ರಗಳು ಕಂಡು ಬಂದು ಶಾಕ್ ಆಗಿದ್ದಾಳೆ.
ಈ ವಿಚಾರ ಸಂಬಂಧ ಪ್ರಿಯಕರನ ಜತೆ ಜಗಳ ನಡೆಸಿ ಆತನಿಂದ ದೂರವಾಗಿದ್ದಾಳೆ. ಬಳಿಕ ತನ್ನ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಆ ಅಧಿಕಾರಿ ಕಚೇರಿಯಲ್ಲಿ ಪರಿಶೀಲಿಸಿದಾಗ ಆತ ಯಾವ ಯುವತಿಗೂ ತೊಂದರೆ ಕೊಟ್ಟಿಲ್ಲ. ಆದರೂ, ಅವರ ಮಾದಕ ಫೋಟೋಗಳನ್ನು ಹೇಗೆ ಸಂಗ್ರಹಿಸಿದ್ದಾನೆ? ಅಥವಾ ಮಾರ್ಫ್ ಮಾಡಿರುವ ಸಾಧ್ಯೆತೆಯಿದೆ ಎಂದು ಅನುಮಾನಗೊಂಡು ನ.23ರಂದು ಕೇಂದ್ರ ವಿಭಾಗದ ಸೆನ್ ಠಾಣೆಗೆ ದೂರು ನೀಡಿದ್ದಾರೆ.