17 ದಿನಗಳಿಂದ ಸುರಂಗದೊಳಗೆ ಸಿಕ್ಕಿದ್ದ 41 ಕಾರ್ಮಿಕರ ರಕ್ಷಣಾಕಾರ್ಯ ಪೂರ್ಣ
ಡೆಹ್ರಾಡೂನ್, ನ 28 (DaijiworldNews/HR): ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದ ಒಳಗೆ ಕಳೆದ 17 ದಿನಗಳಿಂದ ಸಿಲುಕಿದ್ದ ರಕ್ಷಣಾ ಕಾರ್ಯ ಪೂರ್ಣಗೊಂಡಿದ್ದು, ಒಬ್ಬೊಬ್ಬರನ್ನು ಹೊರಕ್ಕೆ ತರಲಾಗುತ್ತಿದೆ. ಮಂಗಳವಾರ ರಾತ್ರಿ 4 ಕಾರ್ಮಿಕರು ಹೊರ ಬಂದಿದ್ದಾರೆ.
41 ಕಾರ್ಮಿಕರನ್ನು ಸ್ಥಳಾಂತರಿಸಲು ಹೆಲಿಕ್ಯಾಪ್ಟರ್, ಅಂಬುಲೆನ್ಸ್ಗಳನ್ನು, ತಾತ್ಕಲಿಕ ಆಸ್ಪತ್ರೆ ಸಹಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇನ್ನು ಕೊರೆವ ಕಾರ್ಯ ಪೂರ್ಣಗೊಂಡ ಬಳಿಕ ಎನ್ಡಿಆರ್ಎಫ್ ಸಿಬ್ಬಂದಿ ಸುರಂಗದೊಳಗೆ ಹೋಗಿ, ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಕರೆ ತರುತ್ತಿದ್ದು, ಈ ಕಾರ್ಯಚರಣೆ ಪೂರ್ಣಗೊಳ್ಳಲು ಕನಿಷ್ಠ 2-3 ಗಂಟೆ ಹಿಡಿಯಲಿದೆ.
ಸ್ಥಳಕ್ಕೆ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್, ಕಾರ್ಮಿಕರ ಬಂಧುಗಳು ಆಗಮಿಸಿದ್ದಾರೆ.