ಕೇರಳ: ಅಪಹರಣಕ್ಕೊಳಗಾದ 6 ವರ್ಷದ ಬಾಲಕಿ ಪತ್ತೆ
ಕೇರಳ: ಕೊಲ್ಲಂ ನಿಂದ ಅಪಹರಣಕ್ಕೊಳಗಾದ 6 ವರ್ಷದ ಬಾಲಕಿ ಅಬಿಗೆಲ್ ಸಾರಾ ರೇಜಿ ಪತ್ತೆಯಾಗಿದ್ದು, ಕೊಲ್ಲಂ ಆಶ್ರಯ ಮೈದಾನದಲ್ಲಿ ಪತ್ತೆಯಾಗಿದ್ದಾಳೆ.
ಅಪಹರಿಸಿದ ತಂಡವು ಮೈದಾನದಲ್ಲಿ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಾಲಕಿಯನ್ನು ಪೊಲೀಸರು ಕೊಲ್ಲಂ ಕಮೀಷನರ್ ಕಛೇರಿ ಗೆ ಕರೆದೊಯ್ದಿದ್ದಾರೆ.
ನಿನ್ನೆ ಸಂಜೆ ಸುಮಾರು 4.30ಕ್ಕೆ ಘಟನೆ ನಡೆದಿದ್ದು, ಬಾಲಕಿ ಅಬಿಗೆಲ್ ಸಾರಾ ರೇಜಿಳನ್ನು ಅಪಹರಣಕಾರರು ಕಾರಿನೊಳಕ್ಕೆ ಎಳೆದೊಯ್ದು ಅಪಹರಿಸಿದ್ದರು. ಇದರ ನಡುವೆ ಅಪಹರಣಕಾರರಿಂದ ಬಾಲಕಿಯ ಪೋಷಕರಿಗೆ ಕರೆ ಬಂದಿದ್ದು, 10 ಲಕ್ಷ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದು, ಹಣ ಸಿಕ್ಕಿದ ಕೂಡಲೇ ಬಾಲಕಿ ಸುರಕ್ಷಿತವಾಗಿ ಹಿಂತಿರುಗಿಸಲಾಗುವುದು ಎಂದು ಹೇಳಿದ್ದಾರೆ.