ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತುಳಿದು ತಂದೆ, ಮಗ ಮೃತ್ಯು
ಬೆಳಗಾವಿ: ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತುಳಿದು ತಾಯಿ ಹಾಗೂ ಮಗು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಅಥಣಿಯಲ್ಲಿ ತಂದೆ ಮತ್ತು ಮಗನಿಗೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32) ಹಾಗೂ ಪ್ರೀತಮ್ ಮಲ್ಲಿಕಾರ್ಜುನ ಪೂಜಾರಿ (7) ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭಾನುವಾರ ಮಧ್ಯಾಹ್ನ ಮಲ್ಲಿಕಾರ್ಜುನ ತೋಟದಲ್ಲಿ ಬೋರ್‌ವೆಲ್ ಮೋಟಾರ್ ಆನ್ ಮಾಡಿ ಬೇರೆ ಕಡೆ ನೀರು ತಿರುವಿಗೆ (ವಾಲ್ ಟರ್ನ್) ಮುಂದಾಗಿದ್ದಾರೆ