June 15, 2024

IPL: ಕಪ್ ಗೆಲ್ಲಲು ಮತ್ತೆ ಬಲಿಷ್ಠ ತಂಡ ಕಟ್ಟಿದ RCB

0

ಮುಂಬೈ: ಎಲ್ಲಾ 10 ಫ್ರಾಂಚೈಸಿಗಳು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ಹರಾಜಿಗೆ ಸಿದ್ಧವಾಗಿವೆ. ಈ ನಡುವೆ ಭಾನುವಾರ ಜಿಯೋಸಿನಿಮಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡವು ರಿಟೇನ್‌, ರಿಲೀಸ್‌ ಮಾಡಿದ ಆಟಗಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ವಿಶ್ವಕಪ್‌ 2023 ರಲ್ಲಿ ಮಿಂಚಿದ್ದ ಜೋಶ್‌ ಹ್ಯಾಜಲ್‌ವುಡ್‌ ಹಾಗೂ ಶ್ರೀಲಂಕಾದ ಸ್ಪಿನ್ನರ್‌ ವಾನಿಂದು ಹಸರಂಗ ಸೇರಿದಂತೆ 11 ಆಟಗಾರರಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗೇಟ್‌ಪಾಸ್‌ ಕೊಟ್ಟಿದೆ.

ಫಾಫ್‌ ಡುಪ್ಲೆಸಿಸ್‌ (ಕ್ಯಾಪ್ಟನ್‌), ಗ್ಲೆನ್‌ ಮ್ಯಾಕ್ಸ್‌ವೆಲ್‌, ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌, ಅನುಜ್‌ ರಾವತ್‌, ದಿನೇಶ್‌ ಕಾರ್ತಿಕ್‌, ಸುಯಶ್ ಪ್ರಭುದೇಸಾಯಿ, ವಿಲ್ ಜ್ಯಾಕ್ಸ್, ಮಹಿಪಾಲ್ ಲೋಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್ ತಂಡಕ್ಕೆ ರಿಟೇನ್‌ ಆಗಿದ್ದಾರೆ.

ಕೈಬಿಟ್ಟ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್, ಕೇದಾರ್ ಜಾಧವ್ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ

Leave a Reply

Your email address will not be published. Required fields are marked *

You may have missed

error: Content is protected !!