ಕೊಡಾಜೆ: ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ
ಬಂಟ್ವಾಳ: ಕೊಡಾಜೆ ಎಜುಕೇಶನ್ ಟ್ರಸ್ಟ್ ನೇರಳಕಟ್ಟೆ, ಡಿಗ್ನಿಟಿ ಆಂಗ್ಲ ಮಾಧ್ಯಮ ಶಾಲೆ, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಹಾಗೂ ಸಮುದಾಯ ದಂತ ವಿಭಾಗ ಯೆನೆಪೋಯ ದಂತ ಕಾಲೇಜು ದೇರಳಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರವು ಕೊಡಾಜೆ ಡಿಗ್ನಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮಿತಾ ಡಿ ಪೂಜಾರಿ ಮಾತನಾಡಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.
ಡಿಗ್ನಿಟಿ ಸ್ಕೂಲ್ ಮತ್ತು ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಹಾಜಿ ಬಿ. ಮುಹಮ್ಮದ್ ರಫೀಕ್ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಕೆ. ಶ್ರೀಧರ ರೈ, ಲತೀಫ್ ನೇರಳಕಟ್ಟೆ, ಹಮೀದ್ ಮಾಸ್ಟರ್, ಶಿಬಿರದ ಸಂಪರ್ಕಾಧಿಕಾರಿಗಳಾದ ಅಬ್ದುಲ್ ರಝಾಕ್, ಭರತ್ ಕುಮಾರ್ ಮಾತನಾಡಿದರು.
ಶಿಬಿರದ ನಿರ್ದೇಶಕ ಡಾ. ಎ.ಮನೋಹರ ರೈ ಶಿಬಿರದ ಬಗ್ಗೆ ಮಾಹಿತಿ ನೀಡಿದರು ಡಿಗ್ನಿಟಿ ಸ್ಕೂಲ್ ಮತ್ತು ಎಜ್ಯುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷ ಉಮ್ಮರ್ ಹಾಜಿ ರಾಜ್ ಕಮಲ್, ಶಾಲಾ ಮುಖ್ಯ ಶಿಕ್ಷಕಿ ಗ್ರೇಸ್ ಪಿ.ಸಾಲ್ದಾನಾ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ರಾಜ್ ಕಮಲ್, ವೈದ್ಯರುಗಳು ಆದ ಡಾ.ಸೈಫುದ್ದೀನ್, ಡಾ. ಅಫೀಫಾ, ಡಾ. ರೇಷ್ಮಾ ಸುವರ್ಣ, ಟ್ರಸ್ಟಿಗಳಾದ ಅಹ್ಮದ್ ಹಾಜಿ ಯುನೈನ್, ನವಾಝ್ ಭಗವಂತಕೋಡಿ, ಇಬ್ರಾಹಿಂ ಹಾಜಿ ನೆಡ್ಯಾಲು, ಸಮದ್ ಪರ್ಲೊಟ್ಟು ಮೊದಲಾದವರು ಉಪಸ್ಥಿತರಿದ್ದರು.
ಇಲ್ಯಾಸ್ ನೇರಳಕಟ್ಟೆ ಸ್ವಾಗತಿಸಿದರು. ಶಿಕ್ಷಕಿಯರಾದ ಅಮೃತಾ ವಂದಿಸಿ, ಜಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.