ಪುತ್ತೂರು: ಸವಣೂರಿನ ಫಾರ್ಮ್ಸ್ ಒಂದರಿಂದ ಅಡಕೆ ಕಳ್ಳತನ: ಮಾಲೀಕನ ಪುತ್ರನ ಕೈಗೆ ಸಿಕ್ಕಿಬಿದ್ದ ಕಳ್ಳರು: ತಲವಾರು ದಾಳಿ ನಡೆಸಿ ಮಾಲೀಕರ ಪುತ್ರನಿಗೆ ಗಾಯ
ಪುತ್ತೂರು: ಸವಣೂರಿನ ಫಾರ್ಮ್ಸ್ ಒಂದರಿಂದ ಅಡಕೆ ಕಳ್ಳತನಕ್ಕೆ ಇಬ್ಬರ ತಂಡ ವಾಹನದಲ್ಲಿ ಬಂದಿದ್ದು ಅಡಕೆ ದೋಚುವ ಸಂದರ್ಭದಲ್ಲಿ ಫಾರ್ಮ್ ಮಾಲೀಕನ ಪುತ್ರನ ಕೈಗೆ ಸಿಕ್ಕಿಬಿದ್ದ ಸಂದರ್ಭ ತಲವಾರು ದಾಳಿ ನಡೆಸಿ ಮಾಲೀಕರ ಪುತ್ರನನ್ನು ಗಾಯಗೊಳಿಸಿದ್ದಾರೆ.P
ಎಡಪತ್ಯ ಫಾರ್ಮ್ಸ್ ಮಾಲೀಕ ರಾಮಚಂದ್ರ ಎಡಪತ್ಯ ಅವರ ಪುತ್ರ ನಿಷ್ಕಲ್ ರಾಮ್ ಎಡಪತ್ಯ ತಲವಾರು ದಾಳಿಗೆ ಒಳಗಾದವರು. ದಾಳಿಯ ವೇಳೆ ಕೈಗೆ ಗಂಭೀರ ಗಾಯವಾಗಿದ್ದು, ಪುತ್ತೂರಿನ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ಬೆಳಗ್ಗಿನ ಜಾವ ನಿಷ್ಕಲ್ ಅವರು ಮೈಸೂರಿನಿಂದ ಬರುವ ಸಂದರ್ಭದಲ್ಲಿ ಅಡಕೆ ಒಣಹಾಕಿದ ಸೋಲಾರ್ ಗೂಡಿನಿಂದ ಕಾರಿಗೆ ಅಡಿಕೆ ತುಂಬುತ್ತಿರುವುದು ಕಂಡು ಬಂದಿದ್ದು, ತಕ್ಷಣ ಜಾಗೃತರಾಗಿ ಕಳ್ಳರನ್ನು ಹಿಡಿದ್ದಾರೆ. ಈ ಸಂದರ್ಭ ಕಳ್ಳರು ತಲವಾರಿನಿಂದ ದಾಳಿ ಮಾಡಿದ್ದು, ಕೈಗೆ ಕೈಗೆ ಗಾಯವಾಗಿದೆ. ಆದರೂ ಕಳ್ಳರಲ್ಲಿ ಓರ್ವನನ್ನು ಹಿಡಿದಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಬಶೀರ್ ಎಂಬಾತ ಸಿಕ್ಕಿಬಿದ್ದ ಕಳ್ಳ. ಕಳೆದ ಹಲವು ದಿನಗಳಿಂದ ನಿರಂತರ ಅಡಕೆ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿರುವ ಬಶೀರ್, ಸುಮಾರು ೫ ಲಕ್ಷಕ್ಕೂ ಅಧಿಕ ಮೊತ್ತದ ಅಡಕೆಯನ್ನು ಸುಲಿದಿಟ್ಟ ಗೋದಾಮು ಹಾಗೂ ಸೋಲಾರ್ ಕೊಠಡಿಯಿಂದ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇನ್ನೋರ್ವ ಕಳ್ಳ ಹಕ್ಕೀಂ ಎಂಬಾತನ ಸೂಚನೆಯ ಮೇರೆಗೆ ಇಲ್ಲಿಗೆ ಆಗಮಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋದಲ್ಲಿ ಕಳ್ಳ ಒಪ್ಪಿಕೊಂಡಿದ್ದಾನೆ. ಇರ್ಷಾದ್ ಎಂಬರಿಗೆ ಸೇರಿದ ಕಾರಿನಲ್ಲಿ ಕಳ್ಳರು ಬಂದಿದ್ದು, ಬಶೀರ್ ಎಂಬಾತನನ್ನು ಫಾರ್ಮ್ ಮಾಲೀಕರು ಬೆಳ್ಳಾರೆ ಠಾಣೆಗೆ ಒಪ್ಪಿಸಿದ್ದಾರೆ