ವಿಟ್ಲ: ಒಂಟಿ ಮಹಿಳೆಗೆ ಚಾಕು ತೋರಿಸಿ ದರೋಡೆಗೆ ಯತ್ನ:
ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯಿಂದ ಕೃತ್ಯ
ವಿಟ್ಲ: ವೃದ್ಧ ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಚಿನ್ನ ಲಪಾಯಿಟಸಲು ಯತ್ನಿಸಿದ ಘಟನೆ ಕುಳ ಗ್ರಾಮದ ನೀರಪಳಿಕೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ನೀರಪಳಿಕೆ ಮಹಮ್ಮದ್ ಕುಂಞಿ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯವರು ಚಿಕಿತ್ಸೆಗಾಗಿ ಆಸ್ಪತ್ರೆ ತೆರಳಿದ್ದಾಗ ಮನೆಯಲ್ಲಿ ವೃದ ಮಹಿಳೆಯ ಒಬ್ಬರು ಮಾತ್ರ ಇರುವ ಸಂದರ್ಭದಲ್ಲಿ ಮನೆಯ ಮುಖ್ಯ ದ್ವಾರದ ಮೂಲಕ ವ್ಯಕ್ತಿ ಒರ್ವ ಮುಖಕ್ಕೆ ಕವಚ (ಮಾಸ್ಕ್) ಹಾಕಿ ಒಳ ಪ್ರವೇಶಿಸಿ, ಒಳಗಿನಿಂದ ಚಿಲಕ ಹಾಕಿ ಮಹಿಳೆಯ ಹತ್ತಿರ ಚಾಕುನೊಂದಿಗೆ ಬಂದು ಕಿವಿಯಲ್ಲಿ ಇರುವ ಚಿನ್ನ ಕೊಡುವಂತೆ ಕೇಳಿದ್ದಾನೆ.
ತಕ್ಷಣ ಬೆದರಿದ ವೃದೆ ಮಹಿಳೆ ಹಿಂದಿನ ಬಾಗಿಲು ಮೂಲಕ ಹತ್ತಿರದ ಮನೆಯವರನ್ನು ಕೂಗಿ ಕರೆದಾಗ ಕಳ್ಳ ಹಿಂಬದಿಯ ತೋಟದ ದಾರಿಯಾಗಿ ಬರೀ ಕೈಯಲ್ಲಿ ಪರಾರಿ ಆಗಿದ್ದಾನೆ.
ತಕ್ಷಣ 112 ಗೆ ಕರೆಮಾಡಿ ಮಾಹಿತಿ ನೀಡಿದ್ದಾಗ ತಕ್ಷಣ ತುರ್ತು ಕಾರ್ಯಪಡೆಯ ಪೋಲಿಸ್ ತಂಡ ಸ್ಥಳಕೆ ಆಗಮಿಸಿದರು. ಬಳಿಕ ವಿಟ್ಲ ಪೋಲಿಸ್ ಠಾಣೆಗೆ ಮಾಹಿತಿ ನೀಡಲಾಯಿತು. ವಿಟ್ಲ ಪೋಲೀಸರು ತನಿಖೆ ಆರಂಬಿಸಿದ್ದಾರೆ.