ಸುಳ್ಯ: ಶಾಲಾ ವಾಹನಕ್ಕೆ ಆಟೋ ರಿಕ್ಷಾ ಡಿಕ್ಕಿ: ಇಬ್ಬರು ಮಕ್ಕಳಿಗೆ ಗಾಯ
ಸುಳ್ಯ :ಸುಳ್ಯದ ಕಳಂಜ ಗ್ರಾಮದ ಕೋಟೆಮುಂಡುಗಾರು ಬಳಿ ನಿಂತಿದ್ದ ಖಾಸಗಿ ಶಾಲಾ ವಾಹನಕ್ಕೆ ಅಟೋ ರಿಕ್ಷಾವೊಂದು ಗುದ್ದಿ ರಿಕ್ಷಾದಲ್ಲಿದ್ದ ಎರಡು ಮಕ್ಕಳಿಗೆ ಅಲ್ಪಸ್ವಲ್ಪ ಗಾಯವಾದ ಘಟನೆ ವರದಿಯಾಗಿದೆ.
ಬೆಳ್ಳಾರೆ ಜ್ಞಾನ ಗಂಗಾ ಶಾಲಾ ವಾಹನ ಕೋಟೆಮುಂಡುಗಾರು ಬಳಿ ವಿದ್ಯಾರ್ಥಿಯೊಬ್ಬನನ್ನು ಇಳಿಸಲು ನಿಲ್ಲಿಸಿದ್ದಾಗ ಬೆಳ್ಳಾರೆ ಕೆ.ಪಿ.ಎಸ್ ಶಾಲಾ ಮಕ್ಕಳನ್ನು ತರುತಿದ್ದ ರಿಕ್ಷಾ ಶಾಲಾ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಶಾಲಾ ವಾಹನದ ಹಿಂಬಾಕ್ಕೆ ಡಿಕ್ಕಿ ಹೊಡೆದಿದೆ.
ಗಾಯಗೊಂಡ ಮಕ್ಕಳನ್ನು ಬೆಳ್ಳಾರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ.