ಪ್ರೀತಿಸಿದ ಕೈಕೊಟ್ಟ ಯುವತಿ: ತನ್ನ ಸ್ಕೂಟರ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಯುವಕ
ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಪಾಗಲ್ ಪ್ರೇಮಿಯೊಬ್ಬ ಹುಚ್ಚಾಟ ಮೆರೆದ ಘಟನೆ ನಡೆದಿದೆ.
ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ಮುಖ್ಯ ದ್ವಾರದ ಬಸ್ ನಿಲ್ದಾಣದ ಬಳಿ ನಡೆದಿದೆ. ಪ್ರೇಯಸಿ ಕೈಕೊಟ್ಟಿದ್ದರಿಂದ ಮನನೊಂದು ಆತುರದ ನಿರ್ಧಾರ ತೆಗೆದುಕೊಂಡಿದ್ದಾನೆ.
ಚೇತನ್ ಎಂಬಾತ 15 ದಿನಗಳ ಹಿಂದೆಯಷ್ಟೇ ಹೊಸ ಸ್ಕೂಟರ್ ಖರೀದಿ ಮಾಡಿದ್ದ. ಆದರೆ ಈ ನಡುವೆ ಚೇತನ್‍ಗೆ ಪ್ರಿಯತಮೆ ಕೈಕೊಟ್ಟಿದ್ದಾಳೆ.
ಪ್ರೀತಿಸಿದ ಯುವತಿ ಕೈಕೊಟ್ಟ ವೇದನೆಯಿಂದ ಚೇತನ್ ತನ್ನ ಸ್ಕೂಟರ್ ಗೆ ತಾನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅಲ್ಲದೇ ಯುವತಿಗೆ ವೀಡಿಯೋ ಕಾಲ್ ಮಾಡಿ ಹೊತ್ತಿ ಉರಿಯುತ್ತಿದ್ದ ಬೇಕಿನ ದೃಶ್ಯವನ್ನು ತೋರಿಸಿದ್ದಾನೆ.