ಮೂಡುಬಿದಿರೆ: ಅಕ್ರಮ ಗೋವುಗಳ ಸಾಗಾಟ: ಇಬ್ಬರ ಬಂಧನ, ಮೂವರು ಪರಾರಿ
ಮೂಡುಬಿದಿರೆ: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಎರಡು ಹಸು ಹಾಗೂ ಎರಡು ಕರುಗಳನ್ನು ರಕ್ಷಿಸಿದ ಘಟನೆ ಮೂಡುಬಿದಿರೆ ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ಮಂಗಳವಾರ ನಡೆದಿದೆ.
ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಕುಮಾರ್ ನೇತೃತ್ವದ ತಂಡವು ಗಸ್ತಿನಲ್ಲಿದ್ದಾಗ ಪಡುಕೊಣಾಜೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪಿಕಪ್ ವಾಹನದಲ್ಲಿ ಎರಡು ಹಸು ಮತ್ತು ಎರಡು ಕರು ಪತ್ತೆಯಾಗಿವೆ.
ಗೋವುಗಳು ಹಾಗೂ ಕರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಚಾಲಕ ವೇಣೂರಿನ ನಡ್ತಿಕಲ್ಲು ನಿವಾಸಿ ಹೈದರ್ ಹಾಗೂ ಪಣಪಿಲದ ಶೈಲೇಶ್ ಮಡಿವಾಳನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಘಟನೆಯಲ್ಲಿ ಗಂಟಾಲ್ಕಟ್ಟೆಯ ಫಾರೂಕ್, ನಿಸಾರ್ ಮತ್ತು ಪಣಪಿಲದ ಹೆರಾಲ್ಡ್ ಫೆರ್ನಾಂಡಿಸ್ ಪರಾರಿಯಾಗಿದ್ದಾರೆ.
ಪೊಲೀಸರು ಆರೋಪಿಗಳನ್ನು ಮೂಡುಬಿಆರೋಪಿಗಳನ್ನುಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ಆರೋಪಿಗಳು ಸಾಗಿಸುತ್ತಿದ್ದ ಹಸುಗಳನ್ನು ಬಜಪೆ ಗೋಶಾಲೆಗೆ ಹಸ್ತಾಂತರ ಮಾಡಲಾಗಿದೆ.”