ಕಾಸರಗೋಡು: ಬಾಲಕಿಗೆ ಲಿಫ್ಟ್ ನಲ್ಲಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸರ ವಶಕ್ಕೆ
ಕಾಸರಗೋಡು: ಲಿಫ್ಟ್ ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬದಿಯಡ್ಕ ನಿವಾಸಿ ಯೋರ್ವನನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪೆರಡಾಲದ ಮುಹಮ್ಮದ್ ( 51) ಬಂಧಿತ ಆರೋಪಿ.
ಎರಡು ದಿನಗಳ ಹಿಂದೆ ಕುಂಬಳೆಯ ಆಸ್ಪತ್ರೆಯೊಂದಕ್ಕೆ ತಾಯಿ ಜೊತೆ ಬಂದಿದ್ದ ಹತ್ತರ ಹರೆಯದ ಬಾಲಕಿಗೆ ಕಿರುಕುಳ ನೀಡಿದ್ದನು. ತಾಯಿ ಮೆಡಿಕಲ್ ನಲ್ಲಿ ಔಷಧಿ ಖರೀದಿಸುತ್ತಿದ್ದಾಗ ಈತ ಲಿಫ್ಟ್ ತೋರಿಸುವುದಾಗಿ ಆಮಿಷ ತೋರಿಸಿ ಕರೆದೊಯ್ದು ಲಿಫ್ಟ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದನು .
ಬಾಲಕಿ ಈ ಬಗ್ಗೆ ತಾಯಿ ಬಳಿ ಹೇಳಿದ್ದು , ಬಳಿಕ ಠಾಣೆಗೆ ತೆರಳಿ ದೂರು ನೀಡಲಾಗಿತ್ತು. ಆಸ್ಪತ್ರೆ ಸಿ ಸಿ ಟಿ ವಿ ದ್ರಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯನ್ನು ಬಂಧಿಸಲಾಗಿದೆ.”