December 23, 2024

ಬೆಳ್ತಂಗಡಿ: ನಕ್ಸಲ್ ಪೀಡಿತ ಪ್ರದೇಶದ ಮನೆಗೆ ಬಂದ ಅಪರಿಚಿತ ತಂಡ ಪ್ರಕರಣ:
ಮನೆಗೆ ಬಂದಿರುವುದು ಮೂಡಬಿದರೆ ಪೊಲೀಸ್ ತಂಡ

0

ಬೆಳ್ತಂಗಡಿ: ನಕ್ಸಲ್ ಪೀಡಿತ ಪ್ರದೇಶದಲ್ಲಿ ರಾತ್ರಿ ಐದು ಜ‌ನ ಅಪರಿಚಿತರ ತಂಡವೊಂದು ಬಾಗಿಲು ಬಡಿದು ವಿಚಾರಿಸಿರುವ ಘಟನೆ ನ. 21 ರಂದು ರಾತ್ರಿ ಕುತ್ಲೂರಿನಲ್ಲಿ ನಡೆದಿರುವ ಘಟನೆಗೆ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ.

ರಾತ್ರಿ ಹೊತ್ತು ಮಂಗಳೂರು ಕಮೀಷನರ್ ರೇಟ್ ವ್ಯಾಪ್ತಿಯ ಮೂಡಬಿದರೆ ಪೊಲೀಸ್ ಠಾಣೆಯ ಪೊಲೀಸರು ಹೋಗಿದ್ದರು. ಈ ಬಗ್ಗೆ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ಇರಲ್ಲಿಲ್ಲ ಎಂದು ‌ನ.22 ರಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಷ್ಯಂತ್ ಸ್ವಷ್ಟಪಡಿಸಿದ್ದಾರೆ.

ಘಟನೆ ವಿವರ:
ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಪೂಂಕಾಜೆ ಮನೆಗೆ ನ.21 ರಂದು ರಾತ್ರಿ ಅಪರಿಚಿತರ ಐದು ಜನರ ತಂಡವೊಂದು ಎಂಟ್ರಿಯಾಗಿ ಬಾಗಿಲು ಓಪನ್ ಮಾಡಲು ಪ್ರಯತ್ನ ಪಟ್ಟಿದ್ದು, ಬಾಗಿಲು ತೆರೆಯದೆ ಇದ್ದಾಗ ರಾಡ್ ನಿಂದ ಬಾಗಿಲು ತೆರೆಯಲು ಬಡಿದಿದ್ದಾರೆ. ತಕ್ಷಣ 112 ಕಂಟ್ರೋಲ್ ರೂಂ ಹಾಗೂ ವೇಣೂರು ಪೊಲೀಸರಿಗೆ ಮಾಹಿತಿ ನೀಡಿದ್ದರು‌. ನಂತರ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್, ವೇಣೂರು ಪೊಲೀಸರು, 112 ಸಿಬ್ಬಂದಿಗಳು ಮನೆಗೆ ದೌಡಾಯಿಸಿ ಮಾಹಿತಿ ಪಡೆದುಕೊಂಡು ಹೋಗಿದ್ದರು.

 

 

ಪೊಲೀಸರ ಬಗ್ಗೆ ನಾಟಕವಾಡಿದ್ದ ಜೋಸಿ:
ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮ ಪೂಂಜಾಜೆ ಮನೆಯ ನಿವಾಸಿ ಜೋಸಿ ಆಂಟೋನಿ ಮತ್ತು ಮಂಜುಳಾ ದಂಪತಿಗಳ ಮನೆಗೆ ನ.21 ರಂದು ರಾತ್ರಿ 9:30 ರ ಸಮಯಕ್ಕೆ ಬ್ಲೂ ಬಣ್ಣದ ಡ್ರೆಸ್ ಹಾಕಿದ ನಾಲ್ಕು ಮಂದಿ ಪುರುಷರು ಮತ್ತು ಪೊಲೀಸ್ ಡ್ರೆಸ್ ಹಾಕಿದ ಒಬ್ಬರು ಮಹಿಳೆ ಮನೆಗೆ ಎಂಟ್ರಿಯಾಗಿ ಬಾಗಿಲು ಬಡಿದಿದ್ದಾರೆ. ಯಾರು ಅಂತ ಕೇಳಿದಾಗ ವೇಣೂರು ಪೊಲೀಸರು ಜೋಸಿ ಬಾಗಿಲು ತೆಗೆಯಿರಿ ಮಾತನಾಡಲು ಇದೆ ಅಂದಿದ್ದಾರೆ‌. ಆದ್ರೆ ದಂಪತಿಗಳು ಬಾಗಿಲು ತೆಗೆಯದೆ ವೇಣೂರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ ಆಗ ವೇಣೂರು ಪೊಲೀಸರು ನಮ್ಮ ಪೊಲೀಸರು ಬಂದಿಲ್ಲ ಎಂದಿದ್ದಾರೆ. ತಕ್ಷಣ 112 ಕಂಟ್ರೋಲ್ ರೂಂಗೆ ಕರೆ ಮಾಹಿತಿ ವಿಚಾರ ತಿಳಿಸಿದ್ದಾರೆ‌. ಕರೆ ಮಾಡುವ ಬಗ್ಗೆ ಐದು ಜನರಿಗೆ ಕೇಳಿಸಿದ್ದು. ತಕ್ಷಣ ಸ್ಥಳದಿಂದ ವಾಪಸ್ ಹೋಗಿದ್ದಾರೆ ನಂತರ 112 ಸಿಬ್ಬಂದಿಗಳು, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ತಂಡ ಹಾಗೂ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಶೈಲಾ ಮತ್ತು ತಂಡದ ಪೊಲೀಸರು ಮನೆಗೆ ಬಂದು ಮಾಹಿತಿ ಪಡೆದುಕೊಂಡು ರಾತ್ರಿ 2 ಗಂಟೆಗೆ ವಾಪಸ್ ಹೋಗಿದ್ದಾರೆ. ಐದು ಜನ ಮನೆಗೆ ಬಂದವರು ಪೊಲೀಸ್ ರೀತಿಯಲ್ಲಿ ಇರಲ್ಲಿಲ್ಲ ನಮಗೆ ಅನುಮಾನ ಇದೆ. ಈ ಐದು ಜನರ ವಿಚಾರದಲ್ಲಿ ಅದಲ್ಲದೆ ನಕ್ಸಲ್ ಬಂದಿರುವ ಅನುಮಾನ ಕೂಡ ಇದೆ ಎಂದು ಮನೆಯ ಯಜಮಾನ ಜೋಸಿ ಆಂಟೋನಿ ಸುಳ್ಳು ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದರು.

ಜಾಗದ ವಿಚಾರದಲ್ಲಿ ದೂರು ಅರ್ಜಿ:
ಜೋಸಿ ಆಂಟೋನಿ ಒಂದೇ ಜಾಗವನ್ನು ಬೆಂಗಳೂರಿನ ಸುಹನಾ ಎಂಬವರು 45 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿದ್ದು, ಇದರಲ್ಲಿ 24 ಲಕ್ಷ ಚೆಕ್ ನೀಡಿದ್ದರು ಹಾಗೂ ಬೆಂಗಳೂರಿನ ಶರತ್ ಎಂಬವರಿಗೆ 48 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿ 19 ಲಕ್ಷದ ಚೆಕ್ ನೀಡಿದ್ದರು. ಇಬ್ಬರಿಗೂ ಜೋಸಿ ಆಂಟೋನಿ ವಂಚನೆ ಮಾಡಿದ್ದ ಈ ಪ್ರಕರಣದ ಬಗ್ಗೆ ಎರಡು ನೊಂದ ವ್ಯಕ್ತಿಗಳು ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಗೆ ದೂರು ಅರ್ಜಿ ನೀಡಿದ್ದರು. ಈ ಸಂಬಂಧ ಕಳ್ಳಾಟ ಮಾಡಿದ್ದರಿಂದ ತಪ್ಪಿಸಿಕೊಳ್ಳಲು ಮೂಡಬಿದರೆ ಪೊಲೀಸರನ್ನು ನಕ್ಸಲರು ಎಂದು ಬಿಂಬಿಸಿ ವೇಣೂರು, 112 ಪೊಲೀಸರಿಗೆ ಕರೆ ಮಾಡಿ ನಾಟಕವಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಪ್ರಕರಣದ ಬಗ್ಗೆ ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಕೂಡ ಸ್ವಷ್ಟಪಡಿಸಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!