March 18, 2026

ಬೆಳ್ತಂಗಡಿ: ನಕ್ಸಲ್ ಪೀಡಿತ ಪ್ರದೇಶದ ಮನೆಗೆ ಬಂದ ಅಪರಿಚಿತ ತಂಡ:
ನಾಲ್ಕು ಜನರ ಜೊತೆ ಪೊಲೀಸ್ ಡ್ರೆಸ್ ನಲ್ಲಿ ಬಂದ ಅಪರಿಚಿತ ಮಹಿಳೆ

0
IMG-20231122-WA0041.jpg

ಬೆಳ್ತಂಗಡಿ: ನಕ್ಸಲ್ ಪೀಡಿತ ಪ್ರದೇಶದಲ್ಲಿ ರಾತ್ರಿ ಐದು ಜ‌ನ ಅಪರಿಚಿತರ ತಂಡವೊಂದು ಬಾಗಿಲು ಬಡಿದು ವಿಚಾರಿಸಿರುವ ಘಟನೆ ನ. 21 ರಂದು ರಾತ್ರಿ ಕುತ್ಲೂರಿನಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಪೂಂಕಾಜೆ ಮನೆಗೆ ನ.21 ರಂದು ರಾತ್ರಿ ಅಪರಿಚಿತರ ಐದು ಜನರ ತಂಡವೊಂದು ಎಂಟ್ರಿಯಾಗಿ ಬಾಗಿಲು ಓಪನ್ ಮಾಡಲು ಪ್ರಯತ್ನ ಪಟ್ಟಿದ್ದು, ಬಾಗಿಲು ತೆರೆಯದೆ ಇದ್ದಾಗ ರಾಡ್ ನಿಂದ ಬಾಗಿಲು ತೆರೆಯಲು ಬಡಿದಿದ್ದಾರೆ. ತಕ್ಷಣ 112 ಕಂಟ್ರೋಲ್ ರೂಂ ಹಾಗೂ ವೇಣೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್, ವೇಣೂರು ಪೊಲೀಸರು, 112 ಸಿಬ್ಬಂದಿಗಳು ಮನೆಗೆ ದೌಡಾಯಿಸಿ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮ ಪೂಂಜಾಜೆ ಮನೆಯ ನಿವಾಸಿ ಜೋಸಿ ಆಂಟೋನಿ ಮತ್ತು ಮಂಜುಳಾ ದಂಪತಿಗಳ ಮನೆಗೆ ನ.21 ರಂದು ರಾತ್ರಿ 9:30 ರ ಸಮಯಕ್ಕೆ ಬ್ಲೂ ಬಣ್ಣದ ಡ್ರೆಸ್ ಹಾಕಿದ ನಾಲ್ಕು ಮಂದಿ ಪುರುಷರು ಮತ್ತು ಪೊಲೀಸ್ ಡ್ರೆಸ್ ಹಾಕಿದ ಒಬ್ಬರು ಮಹಿಳೆ ಮನೆಗೆ ಎಂಟ್ರಿಯಾಗಿ ಬಾಗಿಲು ಬಡಿದಿದ್ದಾರೆ. ಯಾರು ಅಂತ ಕೇಳಿದಾಗ ವೇಣೂರು ಪೊಲೀಸರು ಜೋಸಿ ಬಾಗಿಲು ತೆಗೆಯಿರಿ ಮಾತನಾಡಲು ಇದೆ ಅಂದಿದ್ದಾರೆ‌. ಆದ್ರೆ ದಂಪತಿಗಳು ಬಾಗಿಲು ತೆಗೆಯದೆ ವೇಣೂರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ ಆಗ ವೇಣೂರು ಪೊಲೀಸರು ನಮ್ಮ ಪೊಲೀಸರು ಬಂದಿಲ್ಲ ಎಂದಿದ್ದಾರೆ. ತಕ್ಷಣ 112 ಕಂಟ್ರೋಲ್ ರೂಂಗೆ ಕರೆ ಮಾಹಿತಿ ವಿಚಾರ ತಿಳಿಸಿದ್ದಾರೆ‌. ಕರೆ ಮಾಡುವ ಬಗ್ಗೆ ಐದು ಜನರಿಗೆ ಕೇಳಿಸಿದ್ದು. ತಕ್ಷಣ ಸ್ಥಳದಿಂದ ವಾಪಸ್ ಹೋಗಿದ್ದಾರೆ ನಂತರ 112 ಸಿಬ್ಬಂದಿಗಳು, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ತಂಡ ಹಾಗೂ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಶೈಲಾ ಮತ್ತು ತಂಡದ ಪೊಲೀಸರು ಮನೆಗೆ ಬಂದು ಮಾಹಿತಿ ಪಡೆದುಕೊಂಡು ರಾತ್ರಿ 2 ಗಂಟೆಗೆ ವಾಪಸ್ ಹೋಗಿದ್ದಾರೆ. ಐದು ಜನ ಮನೆಗೆ ಬಂದವರು ಪೊಲೀಸ್ ರೀತಿಯಲ್ಲಿ ಇರಲ್ಲಿಲ್ಲ ನಮಗೆ ಅನುಮಾನ ಇದೆ. ಈ ಐದು ಜನರ ವಿಚಾರದಲ್ಲಿ ಅದಲ್ಲದೆ ನಕ್ಸಲ್ ಬಂದಿರುವ ಅನುಮಾನ ಕೂಡ ಇದೆ ಎಂದು ಮನೆಯ ಯಜಮಾನ ಜೋಸಿ ಆಂಟೋನಿ ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಹಾಗೂ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀಶೈಲಾ ತಂಡ ಮನೆಗೆ ಬಂದ ಐದು ಜನರ ತಂಡದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!