ಪಾಣೆಮಂಗಳೂರು ಉಕ್ಕಿನ ಸೇತುವೆಗೆ ಘನ ಗಾತ್ರದ ವಾಹನಗಳ ಸಂಚಾರ ನಿಷೇಧಕ್ಕೆ ಹಾಕಲಾಗಿದ್ದ ಕಬ್ಬಿಣದ ಕಂಬಗಳು ಒಂದೇ ದಿನದಲ್ಲಿ ಮಾಯ
ಬಂಟ್ವಾಳ : ನೂರಾರು ವರ್ಷಗಳ ಪುರಾತನ ಬ್ರಿಟಿಷ್ ಕಾಲದ ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಬಿರುಕು ಕಂಡ ಹಿನ್ನೆಲೆಯಲ್ಲಿ ಘನ ಗಾತ್ರದ ವಾಹನಗಳ ಸಂಚಾರ ನಿಷೇಧ ಹೇರಲಾಗಿ ಹಾಕಲಾಗಿದ್ದ ಕಬ್ಬಿಣದ ಕಂಬಗಳು ಒಂದೇ ದಿನದಲ್ಲಿ ಮಾಯವಾಗಿದೆ.
ಮತ್ತೆ ಇದೀಗ ಮೊದಲಿನಂತೆ ಘನಗಾತ್ರದ ವಾಹನಗಳ ಸಂಚಾರ ನಿರಾಳವಾಗಿ ಸಂಚಾರ ಮಾಡುತ್ತಿರುವುದು ಕಂಡುಬಂದಿದೆ. ಕೆಲ ದಿನಗಳ ಹಿಂದೆ ಸೇತುವೆಯ ಮಧ್ಯ ಭಾಗದಲ್ಲಿ ಸಣ್ಣ ಬಿರುಕೊಂದು ಕಂಡು ಬಂದ ವಿಡಿಯೋ ಸಕತ್ ವೈರಲ್ ಆಗಿತ್ತು. ಜೊತೆಗೆ ಆಯುಷ್ಯ ಮುಗಿದ ಸೇತುವೆಯಲ್ಲಿ ಘನ ವಾಹನಗಳು ಸಂಚಾರ ಮಾಡದಂತೆ ಎಚ್ಚರಿಕೆಯ ವಿಡಿಯೋ ಹರಿಯಬಿಡಲಾಗಿತ್ತು.
ಮರುದಿನವೇ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಲ್ಲದೆ ಸೇತುವೆಯ ಎರಡು ಭಾಗದಲ್ಲಿ ಕಬ್ಬಿಣದ ಕಂಬಗಳನ್ನು ಹೂತುಹಾಕಿ ಅದರ ಮೇಲೆ ಅಡ್ಡಲಾಗಿ ಕಬ್ಬಿಣದ ರಾಡ್ ನ್ನು ಘನವಾಹನಗಳು ಸಂಚಾರ ಮಾಡದಂತೆ ತಡೆಯಲು ಹಾಕಲಾಗಿತ್ತು.